ಕೋವಿಡ್ ಮೃತದೇಹ ವಿಲೇವಾರಿ ಮಾರ್ಗಸೂಚಿಯಲ್ಲಿ ಬದಲಾವಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಕೋವಿಡ್ ಮೃತದೇಹ ವಿಲೇವಾರಿ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.

ಮೃತ ದೇಹ ಸಾಗಾಣೆಗೆ ಮೃತದೇಹ ವಿಲೇವಾರಿ ನೋಡೆಲ್ ಅಧಿಕಾರಿಯಾದ ಜಿಲ್ಲಾ ಸರ್ಜನ್ , ಆಂಬುಲೆನ್ಸ್ ಅಥವಾ ವಾಹನ ವ್ಯವಸ್ಥೆ ಮಾಡಬೇಕು. ಮೃತ ದೇಹವನ್ನು, ಮರಣ ಸಂಭವಿಸಿದ ಆಸ್ಪತ್ರೆ/ ದೇಹವನ್ನು ಶೇಖರಿಸಿಟ್ಟ ಸಂಸ್ಥೆಯ (ಸರ್ಕಾರಿ ಅಥವಾ ಖಾಸಗಿ) ಪದನಿಮಿತ್ತ ಅಧಿಕಾರಿಗಳು, ಜಿಲ್ಲಾ ಕೋವಿಡ್ ಮೃತ ದೇಹ ನೋಡೆಲ್ ಅಧಿಕಾರಿಯಾದ ಜಿಲ್ಲಾ ಸರ್ಜನ್ ಜೊತೆ ಸಂವಹನ ನಡೆಸಿ, ಸರಿಯಾದ ದೇಹವನ್ನು ಆಂಬುಲೆನ್ಸ್ ಅಥವಾ ವಾಹನಕ್ಕೆ ಹಸ್ತಾಂತರಿಸಲು ಕ್ರಮವಹಿಸಬೇಕು
.
ಮೃತ ದೇಹ ಹಸ್ತಾಂತರಿಸುವಲ್ಲಿ ಯೋಯ ಚೆಕ್ ಲಿಸ್ಟ್ ತಯಾರಿಸಿಬೇಕು, ವಾಹನಗಳ ಚಾಲಕರು ಪ್ರೋಟೋಕಲ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು, ಮೃತದೇಹದ ಅಂತ್ಯ ಸಂಸ್ಕಾರವು ಸಂಬಂಧಿಕರ ಹಕ್ಕು ಮತ್ತು ಜವಾಬ್ದಾರಿಯಾಗಿದ್ದು, ಹತ್ತಿರದ ಸಂಬಂಧಿಕರೊಂದಿಗೆ ಸಂವಹನ ನೆಡಸಿ ಹಸ್ತಾಂತರಿಸಲು, ಚಕಿತ್ಸೆ ನೀಡಿದ ಆಸ್ಪತ್ರೆಯ ಪದನಿಮಿತ್ತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಮೃತದೇಹವನ್ನು ನಿಗದಿತ ವಿಲೇವಾರಿ ಸ್ಥಳದಲ್ಲಿ ಸ್ವೀಕರಿಸಲು ಸಂಬಂಧಿಸಿದ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಗಳು ಓರ್ವ ಜವಬ್ದಾರಿಯುತ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಸದ್ರಿ ಸಿಬ್ಬಂದಿಯು ಮೃತದೇಹ ವಿಲೇವಾರಿಯ ಸಮಯದಲ್ಲಿ ಮಾರ್ಗಸೂಚಿಯು ಪಾಲನೆಯಾಗಿರುವುದನ್ನು ಗಮನಿಸಿ ವೈದ್ಯಾಧಿಕಾರಿಗಳಿಗೆ ಈ ಸಂಬAಧ ವರದಿ ನೀಡಬೇಕು. ಸೂಕ್ಷö್ಮ ಪ್ರಕರಣಗಳಲ್ಲಿ ವೈದ್ಯಾಧಿಕಾರಿಗಳು ಖುದ್ದಾಗಿ ಮೇಲ್ವೀಚಾರಣೆ ಮಾಡಬೇಕು.

ವಾರಸುದಾರರಿಲ್ಲದ ಅಥವಾ ಹೊರಜಿಲ್ಲೆಯ ಮೃತದೇಹಗಳನ್ನು ಸ್ವೀಕರಿಸಲು ನಗರ / ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ನಿರೀಕ್ಷಕರು ಸಂಬಂಧಿಸಿದ ಪೌರಾಯುಕ್ತರು / ಮುಖ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಬೇಕು.

ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಸ್ಮಶಾನದ ವ್ಯವಸ್ಥೆ, ಜವಾಬ್ದಾರಿಯುತ ಅಧಿಕಾರಿಗಳ ಕರ್ತವ್ಯ, ತಾಲೂಕು ದಂಡಾಧಿಕಾರಿಗಳ ಹಾಗೂ ತಹಶೀಲ್ದಾರರ ಕರ್ತವ್ಯ ಮತ್ತು ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

five × five =