ಕೋವಿಡ್ ಸಂಕಷ್ಟದ ನಡುವೆಯೂ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ: ಸಂಸದ ಬಿ. ವೈ. ರಾಘವೇಂದ್ರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಶುದ್ದ ಕುಡಿಯುವ ನೀರಿನ ಯೋಜನೆಗೆ 346.39ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.

ಹೆಮ್ಮಾಡಿ ಜಯಶ್ರೀ ಭವನದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಬೈಂದೂರು ಕ್ಷೇತ್ರದ ಅಭಿವೃದ್ದಿಗೆ ಮಾಡುವಂತದ್ದು ನಮ್ಮ ಕರ್ತವ್ಯ ಅದೇ ರೀತಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಬಜೆಟ್ನಲ್ಲಿ ಅನುಮೋದನೆಯಾಗಿದ್ದು ತಿಂಗಳೊಳಗೆ ಟೆಂಡರ್ ಕರೆದು 788 ಗ್ರಾಮೀಣ ಜನವಸತಿಗಳಿಗೆ 2.42ಲಕ್ಷ ಜನಗಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಇದಾಗಿದೆ. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಡುವರಿ, ಯಡ್ತರೆ, ಬೈಂದೂರು ಪಟ್ಟಣಗಳನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.

ಈ ಯೋಜನೆ ಒಟ್ಟು 346.39 ಕೋಟಿ ರೂ. ಆಗಿದ್ದು ಇದರಲ್ಲಿ 139 ಕೋಟಿ ಕೇಂದ್ರ ಸರಕಾರದ್ದಾಗಿದ್ದು ರಾಜ್ಯ ಸರಕಾರದ ಪಾಲು 80 ಕೋಟಿ, ನಬಾರ್ಡ್ನಲ್ಲಿ 176 ಕೋಟಿ ಒಟ್ಟು ಈ ಯೋಜನೆ ಸಂಪೂರ್ಣವಾಗಲೂ ಸುಮಾರು 500 ಕೋಟಿ ಬೇಕಾಗುತ್ತದೆ ಮುಂದಿನ 2 ವರ್ಷದಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಇದೆ. 2021-22ರ ಸಾಲಿನಲ್ಲಿ ಶಿವಮೊಗ್ಗ ಕ್ಷೇತ್ರಕ್ಕೆ 1600 ಕೋಟಿ ಹಣ ಬಿಡುಗಡೆ ಮಾಡಿದ್ದು ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ 766 ಸಿ ಬೈಂದೂರು – ರಾಣಿಬೆನ್ನೂರು 29.45 ಕಿ.ಮೀ ಅಗಲಿಕರಣ ದ್ವೀಪದ ದ್ವೀಪಥ ರಸ್ತೆಯನ್ನು ನಿರ್ಮಾಣಕ್ಕಾಗಿ 210 ಕೋಟಿ ಅನುದಾನ ಒದಗಿಸಲಾಗಿದೆ. ಉಳಿದ 38 ಕಿ.ಮೀ ಅಭಿವೃದ್ಧಿಗಾಗಿ ಡಿಪಿಆರ್ ರೆಡಿ ಮಾಡಲು 250 ಕೋಟಿ ಪ್ರಾಜೆಕ್ಟ್ ವರದಿ ಮಾಡಲು 13.5 ಕೋಟಿ ಬಿಡುಗಡೆ ಮಾಡಲಾಗುವುದು.

ಹುಲಿಕಲ್ ರಸ್ತೆ ಅಭಿವೃದ್ದಿಗೆ 3 ಕೋಟಿ ರೂ. ಬಾಳೆಬರೆ ಗಾಟ್ ರಸ್ತೆ ಅಭಿವೃದ್ದಿಗೆ 3 ಕೋಟಿ, ರಾಷ್ಟ್ರೀಯ ಹೆದ್ದಾರಿ 766ಸಿ ಯಿಂದ ರಾಣಿಬೆನ್ನೂರಿಗೆ ಹೋಗುವ ರಸ್ತೆಯಲ್ಲಿ ನಗರದಿಂದ ಸುತ್ತ ಮಳಲಿ, ಬೆಕ್ಕೋಳಿ, ಗುಡ್ಡೆಕೊಪ್ಪ, ಹೆಬ್ಬರ್ಲಿಯಿಂದ 16 ಕಿಮೀ ರಸ್ತೆಯನ್ನು ಹೈವೆ ಬಿಟ್ಟು ಯೇಶನ್ ತಗೆದುಕೊಂಡು ಅಲ್ಲಿ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದೆ ಇದರಿಂದ 25 ಕಿ.ಮೀ ದೂರ ಕಡಿಮೆಯಾಗಲಿದೆ.ಇದಕ್ಕೆ 30 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು ಇದರಿಂದ ಬೈಂದೂರಿನಿಂದ ಶಿವಮೊಗ್ಗಕ್ಕೆ ಅತೀ ಕಡಿಮೆ ಸಮಯದಲ್ಲಿ ಪ್ರಯಾಣಿಸಲು ಸಾಧ್ಯ ಎಂದರು.

ಕೋವಿಡ್ ಸಂಕಷ್ಟ ಸಂದರ್ಭ ರಾಜ್ಯ ಸರಕಾರ ಸಾವು ನೋವು ಸಂಭವಿಸಿದೆ ಇದರಿಂಧ ಸಂತ್ರಸ್ತರಾದವರಿಗೆ ಪ್ಯಾಕೇಜ್ ಘೋಷಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

10 + five =