ಕೋವಿಡ್ 19ರ ಹೋರಾಟದಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದದ್ದು: ಡಾ. ನಾಗಭೂಷಣ ಉಡುಪ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಮಾರ್ಚ್ ತಿಂಗಳನಿಂದ ಈ ದಿನದ ತನಕ ಕೋವಿಡ್ 19ರ ವಿರುದ್ಧ ಹೋರಾಟ ಮಾಡುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಹಲವಾರು ಸಂಘ ಸಂಸ್ಥೆಗಳು ಕೈ ಜೋಡಿಸುವುದು ಶ್ಲಾಘನೀಯ. ಕುಂದಾಪುರದ ಈ ಲಯನ್ಸ್ ಕ್ಲಬ್ ಕಳೆದ ಮಾರ್ಚ್‌ನಿಂದಲೆ ನಮಗೆ ಎಲ್ಲಾ ರೀತಿಯ ಸಹಾಯವನ್ನು ನೀಡುತ್ತಾ ಬಂದಿದೆ. ಈ ರೀತಿಯ ಬೆಂಬಲ ಸಂಘ ಸಂಸ್ಥೆಗಳಿಂದ ಸಿಕ್ಕಿದ್ದಲ್ಲಿ ಯಾವ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಕುಂದಾಪುರದ ತಾಲೂಕು ಅಧಿಕಾರಿ ಡಾ. ನಾಗಭೂಷಣ ಉಡುಪ ಹೇಳಿದರು.

Call us

Call us

ಅವರು ಕುಂದಾಪುದ ಲಯನ್ಸ್ ಕ್ಲಬ್‌ಗೆ ಅತಿಥಿಯಾಗಿ ಆಗಮಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು ಕೋವಿಡ್ ೧೯ರ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಿಯಾಗಿ ಕರ್ತವ್ಯ ನಿಭಾಯಿಸಿದ ಡಾ ನಾಗಭೂಷಣ ಉಡುಪ ಅವರನ್ನು ಕ್ಲಬ್‌ನ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಮ್ಮಾಡಿ ಸುಜನ್ ಕುಲಾಲ್ ಇವರಿಗೆ ಶಿಕ್ಷಣಕ್ಕೊಸ್ಕರ ರೂ 15000ವನ್ನು ಹಾಗೂ ವೈದ್ಯಕೀಯ ವೆಚ್ಚಕ್ಕಾಗಿ ಪ್ರಶಾಂತರವರಿಗೆ ರೂ 15000 ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷರಾದ ಲಯನ್ ಚಂದ್ರಶೇಖರ ಕಲ್ಪತರು ವಹಿಸಿದ್ದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಲಯನ್ ಡಾ ರಾಜೇಂದ್ರ ನಿರ್ವಹಿಸಿದರು.

Leave a Reply

Your email address will not be published. Required fields are marked *

2 × 5 =