ಕೌಶಲಾಭಿವೃದ್ಧಿ ಕಾರ್ಯಗಾರ ಉದ್ಘಾಟನೆ

Call us

Call us

Call us

Call us

ಬೈಂದೂರು: ವಿಶ್ವವಿದ್ಯಾನಿಲಯ ನೀಡುವ ಪದವಿಯೊಂದಿಗೆ, ಉದ್ಯೋಗಕ್ಕೆ ಅಗತ್ಯವಿರುವ ಜೀವನ ಕೌಶಲ್ಯದ ಜೊತೆಗೆ ತಾಂತ್ರಿಕ ಕೌಶಲ್ಯ ಕಲಿತುಕೊಂಡಲ್ಲಿ ವೃತ್ತಿ ಹಾಗೂ ಔದ್ಯಮಿಕ ಜೀವನ ಯಶಸ್ಸಿನ ಪಥದಲ್ಲಿ ಸಾಗುವುದರಲ್ಲಿ ಅನುಮಾನವಿಲ್ಲಾ, ಆ ನೆಲೆಯಲ್ಲಿ ಕೌಶಲಾಭಿವೃದ್ಧಿ ಕಾರ್ಯಗಾರ ಅರ್ಥಪೂರ್ಣ ಮತ್ತು ಉಪಯುಕ್ತವೆಂದು ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ. ಮದುಸೂದನ್ ಭಟ್ ಹೇಳಿದರು.

Call us

Click Here

Click here

Click Here

Call us

Visit Now

Click here

ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಐ.ಕ್ಯೂ.ಏ.ಸಿ ಮತ್ತು ಪ್ಲೆಸೆಮೆಂಟ್ ಸೆಲ್ ಸಹಯೋಗದೊಂದಿಗೆ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಎರಡು ದಿನದ ಕೌಶಲಾಭಿವೃದ್ಧಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಸಂಯೋಜಕ ಡಾ, ಉಮೇಶ ಮಯ್ಯ ಪ್ರಸ್ತಾವಿಸಿ, ವಿದ್ಯಾರ್ಥಿಗಳಿಗೆ ಮೌಲ್ಯಶಿಕ್ಷಣ, ಗುರಿ, ನಿರ್ಧಾರ, ಸ್ವ‌ಉದ್ಯೋಗ, ಪದವಿ ನಂತರ ಉದ್ಯೋಗಾವಕಾಶಗಳು, ವೃತ್ತಿಪರ ಕೋರ್ಸಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಈ ಸಂದರ್ಭದಲ್ಲಿ ಕಾನೂನು ಪದವಿ ಸಂದರ್ಶನ ಎದುರಿಸುವುದು, ಬಯೋಡಾಟ ಬರೆಯುವ ಕಲೆ, ಸ್ಪರ್ದಾತ್ಮಕ ಪರೀಕ್ಷೇಗಳ ತಯಾರಿಗಳ ಬಗ್ಗೆ ವಿವರವಾದ ಮಾಹಿತಿ ಮತ್ತು ತರಬೇತಿ ನೀಡಲಾಗುವುದು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೋ. ಬಿ, ಏ, ಮೇಳಿ ಕೌಶಲಾಭಿವೃದ್ಧಿ ಕುರಿತಾಗಿ ಸರಕಾರ ಐ.ಕ್ಯೂ‌ಏ.ಸಿ ಮತ್ತು ಪ್ಲೆಸೆಮೆಂಟ್ ಸೆಲ್ ನಂತಹ ಕಾರ್ಯಕ್ರಮಗಳೋಂದಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತಿಗೆ ಬದುಕಲು ಆಣಿಗೊಳಿಸುತ್ತಿರುವ ಕ್ರಮವನ್ನು ಸ್ವಾಗತಿಸಿದರು. ಐ.ಕ್ಯೂ‌ಏ.ಸಿ ಸೆಲ್‌ನ ಸಂಚಾಲಕ ಪ್ರೋ ಅನಿಲ್ ಕುಮಾರ ಸ್ವಾಗತಿಸಿದರು, ಪ್ಲೆಸೆಮೆಂಟ್ ಸೆಲ್‌ನ ಸಂಚಾಲಕ ರಘು ನಾಯ್ಕ ವಂದಿಸಿದರು. ಕನ್ನಡ ಉಪನ್ಯಾಸಕ ಸತೀಶ ಎಂ, ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

18 − 6 =