ಕ್ಯಾನ್ಸರ್ ಕುರಿತ ಉಚಿತ ಆರೋಗ್ಯ ತಪಾಸಣಾ ಶಿಬಿರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಕೆ.ಎಂ.ಸಿ. ಮಣಿಪಾಲ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಇನ್ನರ್ ವೀಲ್ ಕ್ಲಬ್ ಬೈಂದೂರು, ಸ್ಪರ್ಶ ಸಂಪದ ಉಡುಪಿ, ಕ್ಯಾಥೋಲಿಕ್ ಸ್ತ್ರೀ ಸಂಘಟನೆ, ಆರಾಧನಾ ಮಹಾಸಂಘ ಬೈಂದೂರು, ಹೋಲಿ ಕ್ರಾಸ್ ಚರ್ಚ್ ಬೈಂದೂರು, ಇವರ ಸಹಯೋಗದೊಂದಿಗೆ ಕ್ಯಾನ್ಸರ್ ಕುರಿತು ಮಾಹಿತಿ ಹಾಗೂ 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಗರ್ಭಕಂಠದ ( ಪ್ಯಾಪ್ ಸ್ಮೆಯರ್ ) ಸ್ಥನ ಕ್ಯಾನ್ಸರ್ ಹಾಗೂ ಬಾಯಿ ಕ್ಯಾನ್ಸರ್ ಮಧುಮೇಹ ರಕ್ತ ಪರೀಕ್ಷೆ & ರಕ್ತದೊತ್ತಡ ತಪಾಸಣಾ ಶಿಬಿರ ವೇಲ್ನೇಸ್ ಸೆಂಟರ್ ಬಿ ಇ ಒ ಕಚೇರಿ ಹತ್ತಿರ ಸಿ ಎಚ್ ಸಿ ಸಬ್ ಸೆಂಟರ್ ಯೋಜನ ನಗರದಲ್ಲಿ ನಡೆಯಿತು.

Call us

Call us

Visit Now

ಬೈಂದೂರು ಹೋಲಿ ಕ್ರಾಸ್ ಚರ್ಚ್ ಧರ್ಮಗುರು ವಂ| ವಿನ್ಸೆಂಟ್ ಕುವೆಲ್ಲೊ ಶಿಬಿರ ಉದ್ಘಾಟಿಸಿದರು. ಬೈಂದೂರು ಆರೋಗ್ಯ ಕೇಂದ್ರದ ವೈದ್ಯರಾದ ಡಾ. ನಂದಿನಿ, ಡಾ. ನಿವೇದಿತಾ, ಇನ್ನರ್ ವೀಲ್ ಅಧ್ಯಕ್ಷೆ ಭಾನುಮತಿ ಬಿ ಕೆ., ಸ್ಪರ್ಶ- ಸಂಪದ ಉಡುಪಿ (ಕೋ ಆರ್ಡಿನೇಟರ್ ಜುಡಿತ್ ಡಿಸೋಜ, ಕ್ಯಾಥೋಲಿಕ್ ಸ್ತ್ರೀ ಸಂಘಟನಾ ಅಧ್ಯಕ್ಷರಾದ ಶಾಂತಿ ಡಯಾಸ್, ಕಾರ್ಯದರ್ಶಿ ಜೋಸಾಫಿನ್ ರೋಡ್ರಿಗಸ್, ಸಂಪದ ಉಡುಪಿ ಪ್ರೇರಕಿ ಸಿಂತ್ಯಾ ರೋಡ್ರಿಗಸ್ ಉಪಸ್ಥಿತರಿದ್ದರು.

Click here

Call us

Call us

90 ಕ್ಕೂ ಹೆಚ್ಚು ಮಹಿಳೆಯರು ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು. ಆರ್.ಎನ್.ಸಿ.ಡಿ ಕೌನ್ಸಿಲರ್ ನಾಗರಾಜ್ ಸ್ವಾಗತಿಸಿ ಶಾಂತಿ ಡಯಾಸ್ ವಂದಿಸಿದರು.

Leave a Reply

Your email address will not be published. Required fields are marked *

seventeen + 20 =