ಕ್ರೀಯಾಶೀಲ ಶಿಕ್ಷಕರಿಂದ ವಿದ್ಯಾರ್ಥಿಯ ಸುಪ್ತ ಪ್ರತಿಭೆ ಬೆಳಕಿಗೆ: ಗ್ರೀಷ್ಮಾ ಭಿಡೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಸಮಾಜಕ್ಕೆ ಶಕ್ತಿ ಕೊಡುವ ಕೇಂದ್ರವಾದ ವಿದ್ಯಾಮಂದಿರಗಳಲ್ಲಿ ಧನಾತ್ಮಕ ಚಿಂತನೆಗಳು ದೊಡ್ಡ ಶಕ್ತಿಯಾಗಬೇಕು. ಶಾಲೆಯಲ್ಲಿನ ಕ್ರೀಯಾಶೀಲ ಶಿಕ್ಷಕರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅರಳುತ್ತದೆ. ಇಂತಹ ಪರಿಸರದಲ್ಲಿ ಕಲಿಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯುತ್ತಾರೆ ಎಂದು ತಾಪಂ ಸದಸ್ಯೆ ಗ್ರೀಷ್ಮಾ ಭಿಡೆ ಹೇಳಿದರು.

Click Here

Call us

Call us

ಕೊಲ್ಲೂರು ಧರ್ಮಪೀಠ ಆಶ್ರಮದ ವತಿಯಿಂದ ಅತ್ಯಂತ ಹಿಂದುಳಿದ ಪ್ರದೇಶದ ಸಲಗೇರಿ, ಹಳ್ಳಬೇರು, ಮಾವಿನಕಾರು ಹಾಗೂ ಕೊಲ್ಲೂರು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ೧೧ನೇ ವರ್ಷದ ಶೈಕ್ಷಣಿಕ ಸವಲತ್ತು ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Click here

Click Here

Call us

Visit Now

ಅಧ್ಯಕ್ಷತೆವಹಿಸಿದ್ದ ಗ್ರಾಪಂ ಅಧ್ಯಕ್ಷ ಮಾವಿನಕಾರು ಜಯಪ್ರಕಾಶ ಶೆಟ್ಟಿ ಮಾತನಾಡಿ, ಕೊಲ್ಲೂರಿನ ಈ ಪುಣ್ಯಭೂಮಿಯಲ್ಲಿ ಧರ್ಮಪೀಠ ಆಶ್ರಮದ ವತಿಯಿಂದ ಮಠದ ಸ್ವಾಮೀಜಿಯವರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಈ ಭಾಗದ ಜನರಿಗೆ ಸಹಾಯಹಸ್ತ ನೀಡುವ ಮೂಲಕ ಧರ್ಮಕಾರ್ಯ ಮಾಡುತ್ತಿರುವುದು ಅಭಿನಂದನೀಯ ಎಂದರು.

ಕಳೆದ ಹನ್ನೊಂದು ವರ್ಷದಿಂದ ಮಕ್ಕಳಿಗೆ ಪುಸ್ತಕ ಮತ್ತು ಕೊಡೆಗಳನ್ನು ನೀಡುತ್ತಿದ್ದು, ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಖಡ್ಡಾಯ ಶಿಕ್ಷಣ ಪಡೆಯಬೇಕು ಎಂಬ ನೆಲೆಯಲ್ಲಿ ಸರಕಾರ ಮಕ್ಕಳಿಗೆ ಅನೇಕ ಕಲಿಕಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದಕ್ಕೆ ಸಂಘ-ಸಂಸ್ಥೆಗಳು ಕೈಕೋಡಿಸುತ್ತಿವೆ. ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ಖಡ್ಡಾಯ ಹಾಜರಾತಿ, ಶಾಲೆಗೆ ಮಕ್ಕಳನ್ನು ದಾಖಲಿಸುವಲ್ಲಿ ಎಸ್‌ಡಿಎಂಸಿ, ಶಿಕ್ಷಕರು ಹಾಗೂ ಪಾಲಕರು ಒಂದಾಗಿ ಕೆಲಸ ಮಾಡಿದಾಗ ಮಾತ್ರ ಅಂತಹ ಶಾಲೆಗಳು ಆಂಗ್ಲಮಾಧ್ಯಮ ಶಾಲೆಗಳಿಗೂ ಪೈಪೋಟಿ ನೀಡಲು ಸಾಧ್ಯ ಎಂದರು.

ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ. ರಮೇಶ ಗಾಣಿಗ, ಗ್ರಾಪಂ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಎಸ್. ಕುಮಾರ್, ಪ್ರೇಮಾ, ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಚಂದ್ರಶೇಖರ ಅಡಿಗ ಉಪಸ್ಥಿತರಿದ್ದರು. ಧರ್ಮಪೀಠ ಆಶ್ರಮದ ತಥಾತ ವಿವಸ್ವನ್ ಸ್ವಾಮೀಜಿ ಪ್ರಾಸ್ತಾವಿಸಿದರು. ಕೇಶವಮೂರ್ತಿ ಸ್ವಾಗತಿಸಿ, ಯಶೋದಾ ಕೆ. ಎನ್. ವಂದಿಸಿದರು. ಹರೀಶ್ ಕುಮಾರ್ ನಿರೂಪಿಸಿದರು. ನಂತರ ರೂ. ೧.೫ ಲಕ್ಷ ಮೌಲ್ಯದ ಶೈಕ್ಷಣಿಕ ಸವಲತ್ತುಗಳನ್ನು ಸುಮಾರು ನಾನ್ನೂರು ವಿದ್ಯಾರ್ಥಿಗಳಿಗೆ ಸ್ವಾಮೀಜಿ ವಿತರಿಸಿದರು. ಈಗಾಗಲೇ ಧರ್ಮಪೀಠ ಆಶ್ರಮದ ವತಿಯಿಂದ ರೂ.೪.೮೦ ಲಕ್ಷ ವೆಚ್ಚದಲ್ಲಿ ಹಳ್ಳಿಬೇರು ಸಕಿಪ್ರಾ ಶಾಲಾ ನೂತನ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಶೀಘ್ರ ಲೋಕಾರ್ಪಣೆಯಾಗಲಿದೆ.

Call us

 

Leave a Reply

Your email address will not be published. Required fields are marked *

2 + nine =