ಕ್ರೈಸ್ತ ಧರ್ಮಕ್ಕೆ ಮತಾಂತರ ಆರೋಪ: ಕೋಡಿ ಸಮೀಪದ ಮನೆಯೊಂದಕ್ಕೆ ದಾಳಿ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ

Call us

Click Here

Click here

Click Here

Call us

Visit Now

Click here

ಕುಂದಾಪುರ: ಇಲ್ಲಿನ ಕೋಡಿ ಕಿನಾರೆ ಬಳಿಯ ಮನೆಯೊಂದರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಪ್ರೇರೆಪಿಸುತ್ತಿದ್ದಾರೆಂದು ಆರೋಪಿಸಿದ ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ, ಕೆಲವರನ್ನು ವಶಕ್ಕೆ ಪಡೆದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಕಳೆದ 2-3ತಿಂಗಳುಗಳಿಂದ ಹಿಂದೂ ಧರ್ಮಕ್ಕೆ ಸೇರಿದ ಕೆಲವು ವ್ಯಕ್ತಿಗಳನ್ನು ಕರೆದೊಯ್ದು ಕೋಡಿ ಕಿನಾರೆ ಸಮೀಪದ ಮನೆಯೊಂದರಲ್ಲಿ ಮತಾಂತರಕ್ಕೆ ಪ್ರೇರಣೆ ನಿಡುತ್ತಿದ್ದಾರೆಂಬ ಗುಮಾನಿ ಹೊಂದಿದ್ದ ಸ್ಥಳೀಯ ಕೆಲವು ಯುವಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಳೆದ ವಾರವಷ್ಟೇ ಮತಾಂತರದ ವಿಚಾರಕ್ಕೆ ಸಣ್ಣ ಗಲಾಟೆಯೂ ನಡೆದಿತ್ತೆನ್ನಲಾಗಿದೆ. ಆದರೂ ಇದನ್ನು ಲೆಕ್ಕಿಸದೇ ಇಂದು ಬೆಳಿಗ್ಗೆ ಓಮ್ನಿ ಕಾರಿನಲ್ಲಿ ಬಂದ ಕ್ರೈಸ್ತ ಧರ್ಮಕ್ಕೆ ಸೇರಿದ ಒಂದಿಬ್ಬರು ಯುವಕರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿ ವಾಸವಿರುವ ವಿಜಾಪುರದ ನಿವಾಸಿಗಳೆನ್ನಲಾದ ಕೆಲವರನ್ನು ಖಾಯಿಲೆ ಗುಣಪಡಿಸುವ ಆಮಿಷವೊಡ್ಡಿ ಕರೆದೊಯ್ಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ ಮತ್ತೊಂದು ತಂಡ ರಿಕ್ಷಾದಲ್ಲಿ ಕೋಡಿಗೆ ತೆರಳಿ ಅಲ್ಲಿ ನೆರೆದಿದ್ದ ಹಿಂದೂ ಧರ್ಮದರಿಗೆ ಪ್ರಾಥನೆ ಭೋದನೆಯಲ್ಲಿ ತೊಡಗಿದ್ದಾಗ ದಾಳಿ ನಡೆಸಿದ ಪೊಲೀಸರು ಈ ಬಗ್ಗೆ ಅಲ್ಲಿದ್ದ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಸ್ಥಳಿಯರ ಆರೋಪವನ್ನು ತಳ್ಳಿ ಹಾಕಿರುವ ಆ ಮನೆಯಲ್ಲಿದ್ದ ಕೆಲವರು ನಾವು ಮತಾಂತರಗೊಳ್ಳಲು ಇಲ್ಲಿಗೆ ಬಂದಿಲ್ಲ. ಇಲ್ಲಿ ಪ್ರಾರ್ಥನೆ ಮಾಡುವುದರಿಂದ ನಮಗೆ ನೆಮ್ಮದಿ ದೊರೆಯುತ್ತದೆ. ಹಾಗಾಗಿಯೇ ಇಲ್ಲಿ ಸೇರಿದ್ದೇವೆ ಎಂದಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಆದರೆ ಪರವಾನಿಗೆ ಇಲ್ಲದೇ ಮೈಕ್ ಬಳಸಿರುವುದು ಮತ್ತು ಸ್ಥಳೀಯರ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಕೆಲವರನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Convert to cristician community is forced in Kundapura kodi. Police ride the house (1) Convert to cristician community is forced in Kundapura kodi. Police ride the house (2) Convert to cristician community is forced in Kundapura kodi. Police ride the house (4) Convert to cristician community is forced in Kundapura kodi. Police ride the house (6) Convert to cristician community is forced in Kundapura kodi. Police ride the house (8)k

Call us

Leave a Reply

Your email address will not be published. Required fields are marked *

2 × two =