ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ ಉಚಿತ ನೋಟ್‌ಬುಕ್ ವಿತರಣೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ಸಂಘವು ವಾರ್ಷಿಕ ಬಂದ ಲಾಭಾಂಶದಲ್ಲಿ ರೂ. 7-8ಲಕ್ಷ ಹಣವನ್ನು ಪ್ರತಿ ಮಗುವು ಶಿಕ್ಷಣ ವಂಚಿತವಾಗದೆ ಪ್ರತಿಭಾವಂತರಾಗಬೇಕು ಎಂಬ ಉದ್ದೇಶದಿಂದ ಶಿಕ್ಷಣಕ್ಕೆ ಸಂಬಂಧಪಟ್ಟ ಚಟುವಟಿಕೆಗಾಗಿ ವ್ಯಯಿಸುತ್ತಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

Call us

Call us

ಉಪ್ಪುಂದದ ಶಂಕರ ಕಲಾ ಮಂದಿರದ ಸಮೃದ್ಧ್ ಸಭಾಭವನದಲ್ಲಿ ನಡೆದ ಸಂಘದ ವತಿಯಿಂದ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ 38 ಸರಕಾರಿ ಹಿರಿಯ, ಪ್ರಾಥಮಿಕ ಶಾಲೆಗಳ 8ನೇ ತರಗತಿಯವರೆಗಿನ 3271 ವಿದ್ಯಾರ್ಥಿಗಳಿಗೆ ಸುಮಾರು 4ಲಕ್ಷ ರೂ. ಮೌಲ್ಯದ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು

ಸಮಾಜದ ಬದ್ದತೆಗೆ ಅನುಕೂಲ ನೀಡಬೇಕಾದ ನೆಲೆಯಲ್ಲಿ ಹಾಗೂ ಸಮಾಜವನ್ನು ಮುನ್ನಡೆಸುವ ಹೊಣೆ ಅರಿತು ಸರಕಾರ ಒಂದರಿಂದ ಏಳನೇ ತರಗತಿಯವರೆಗೆ ಅತೀ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಚಿಂತನೆ ಮಾಡಬೇಕು. ಮುಂದಿನ ೧೦ ವರ್ಷದ ದೂರದೃಷ್ಠಿತ್ವದಿಂದ ಯೋಚಿಸಿದಾಗ ಸರಕಾರಿ ಶಾಲೆಗಳಿಗೆ ಮಕ್ಕಳೆ ಸಿಗದ ಪರಿಸ್ಥಿತಿ ನಿರ್ಮಾಣವಾಗಬಹುದು. ಅದಲ್ಲವಾದರೆ ಗ್ರಾಮಕ್ಕೊಂದು ಮಾದರಿ ಶಾಲೆ ಮಾಡಿ ಮಕ್ಕಳಿಗೆ ವಾಹನದ ವ್ಯವಸ್ಥೆಯ ಜತೆಗೆ ಎಲ್ಲಾ ರೀತಿಯ ಮೂಲಸೌಕರ್ಯ ನೀಡುವಂತಾಬೇಕು. ಶಿಕ್ಷಕರ ಸಮಸ್ಯೆಗಾಗಿ ಮಕ್ಕಳ ಭವಿಷ್ಯಕ್ಕೆ ಕೊಡಲಿ ಏಟು ಹಾಕುವುದು ಸರಿಯಲ್ಲ. ಹೆಚ್ಚುವರಿ ಶಿಕ್ಷಕರಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೀಡುವುದರ ಮೂಲಕ ಅವರ ಸಮಸ್ಯೆಯನ್ನೂ ಪರಿಹರಿಸಬಹುದು. ಕೆಲವು ಕಡೆಗಳಲ್ಲಿ ಮಕ್ಕಳಿಲ್ಲದ ಶಾಲೆಗಳನ್ನು ಮುಚ್ಚುವುದರಿಂದ ಊರಿಗೆ ಕೇಡಾಗದು. ಇದಿಲ್ಲವಾದರೆ ಮನೆ ಹಾಳಾಗುತ್ತದೆ. ಯೋಚನೆಯ ಕೊರತೆಯಿಂದ ವ್ಯವಸ್ಥೆ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಹೊಸ ನೀತಿಸೂತ್ರ ಜಾರಿಗೊಳಿಸಬೇಕಾಗಿದೆ ಎಂದರು.

Call us

Call us

ನಿವೃತ್ತ ಪ್ರಾಂಶುಪಾಲ ಯು. ವೆಂಕಪ್ಪ ಐತಾಳ್ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನು ವಿತರಿಸಿದರು. ಉಪ್ಪುಂದ ಸಪಪೂ. ಕಾಲೇಜು ಪ್ರಾಂಶುಪಾಲ ಸೀತಾರಾಮ ಮಯ್ಯ, ಎಸ್‌ಡಿಎಂಸಿ. ಉಪಾಧ್ಯಕ್ಷ ಮಂಜುನಾಥ ಖಾರ್ವಿ, ನಾವುಂದ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ, ಸಹಕಾರಿ ಸಂಘಗಳ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ ಹಾಗೂ ಸಂಘದ ಸರ್ವ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಸತೀಶ ಪೈ ಸ್ವಾಗತಿಸಿ, ವ್ಯವಸ್ಥಾಪಕ ಹಾವಳಿ ಬಿಲ್ಲವ ವಂದಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಗಾಣಿಗ ನಿರೂಪಿಸಿದರು.

Leave a Reply

Your email address will not be published. Required fields are marked *

seventeen + two =