ಖಂಬದಕೋಣೆ ರೈ.ಸೇ.ಸ. ಸಂಘದ ಆಶ್ರಯದಲ್ಲಿ ರೈತ ದಿನಾಚರಣೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೈತರು ಇಂದಿನ ದಿನಗಳಲ್ಲಿ ಹಲವಾರು ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳು ಇವೆ. ಸಮಸ್ಯೆಗಳನ್ನು ನಿವಾರಿಸಿಕೊಂಡು ಸಂಘಟಿತರಾದಲ್ಲಿ ಯಶಸ್ಸು ಖಚಿತ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಹೇಳಿದರು.

Call us

Click Here

Click here

Click Here

Call us

Visit Now

Click here

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ, ರೈತಸಿರಿ ಹಾಗೂ ರೈತ ಸೇವಾ ಒಕ್ಕೂಟದ ಸಹಭಾಗಿತ್ವದಲ್ಲಿ ಸಂಘದ ರೈತಸಿರಿ ಸಭಾಂಗಣದಲ್ಲಿ ನಡೆದ ವಿಶ್ವ ರೈತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ವೈಜ್ಞಾನಿಕ ಕೃಷಿ ವಿಧಾನಕ್ಕೆ ಹೊಂದಿಕೊಳ್ಳದೆ ಇರುವುದು, ಕೃಷಿಯಿಂದ ಉತ್ತಮ ಇಳುವರಿ ಸಿಗದೇ ಇರುವುದು, ಹೆಚ್ಚು ರಾಸಾಯನಿಕ ಗೊಬ್ಬರ ಬಳಸದೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಸಮಗ್ರ ಕೃಷಿಯಿಂದಾಗುವ ಅನುಕೂಲ ಹಾಗೂ ಲಾಭವು ಜಗತ್ತಿನ ಯಾವುದೇ ವೃತ್ತಿಯಿಂದ ಸಿಗುವುದಿಲ್ಲ. ಯುವ ಪೀಳಿಗೆಯನ್ನು ಕೃಷಿಯ ಕಡೆಗೆ ಆಕರ್ಷಿಸಲು ಹಿರಿಯರು ಪ್ರಯತ್ನಿಸಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಸ್ವಾಗತಿಸಿ. ಹಿರಿಯ ವ್ಯವಸ್ಥಾಪಕ ಚಂದಯ್ಯ ಶೆಟ್ಟಿ ವಂದಿಸಿದರು. ಚಂದ್ರ ಮೊಗವೀರ ನಿರೂಪಿಸಿದರು.

ಬಿಜೂರು ಗ್ರಾಮದ ಕಂಚಿಕಾನಿನ ಹಿರಿಯ ಪ್ರಗತಿಪರ ರೈತ ಹಾಗೂ ಸಹಕಾರಿ ದೀಟಿ ಕೊರಗ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಸಂಘದ ನೂತನ ದಿನದರ್ಶಿಕೆ ಬಿಡುಗಡೆ, ಸಾಧಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು, ಸಾಧಕ ಕೃಷಿಕ, ಹೈನುಗಾರರನ್ನು, ನಿವೃತ್ತ ಸರ್ಕಾರಿ, ಸಹಕಾರಿ ನೌಕರರನ್ನು ಗೌರವಿಸಲಾಯಿತು.

Call us

ಸಂಘದ ಉಪಾಧ್ಯಕ್ಷ ಈಶ್ವರ, ನಿರ್ದೇಶಕರಾದ ಮೋಹನ ಪೂಜಾರಿ, ಗುರುರಾಜ ಹೆಬ್ಬಾರ್, ಮಂಜು ದೇವಾಡಿಗ, ನಾಗರಾಜ ಖಾರ್ವಿ, ಭರತ್ ದೇವಾಡಿಗ, ಹೂವಯ್ಯ ನಾಯ್ಕ್, ಜಲಜಾಕ್ಷಿ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ ಇದ್ದರು.

Leave a Reply

Your email address will not be published. Required fields are marked *

4 × 2 =