ಖಂಬದಕೋಣೆ ಸಹಕಾರಿ ಸಂಘಕ್ಕೆ ಸಹಕಾರಿ ಸಂಘಗಳ ಅಧ್ಯಕ್ಷರ ಮತ್ತು ಸಿ.ಇ.ಓ ಭೇಟಿ.

Call us

Call us

Click here

Click Here

Call us

Call us

Visit Now

ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಗೆ ಉತ್ತರ ಕನ್ನಡ ಜಿಲ್ಲೆಯ(ಶಿರಸಿ) ಸಿದ್ದಾಪುರ ತಾಲೂಕಿನ ವ್ಯಾಪ್ತಿಯ ಎಲ್ಲಾ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿ ವರ್ಗದವರು ಅಧ್ಯಯನ ಭೇಟಿ ನೀಡಿದರು.

Call us

Call us

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇವರು ಸಂಘದ ಕಾರ್ಯಚಟುವಟಿಕೆ, ಅಭಿವೃದ್ಧಿ, ಠೇವಣಿಗಳು, ವ್ಯವಹಾರಿಕ ಸಾಲಗಳು, ವಾಹನ ಸಾಲ, ಬೆಳೆಸಾಲಗಳ, ಅಲ್ಪಾವಧಿ ದೀರ್ಘಾವಧಿ ಸಾಲಗಳ ವಿತರಣೆ ಹಾಗೂ ಮರುಪಾವತಿ ಕ್ರಮ ಮುಂತಾದುವುಗಳ ಬಗ್ಗೆ ವಿವರಿಸಿದರು. ಸಂಘದ ಎಲ್ಲಾ ಸದಸ್ಯರನ್ನು, ಗ್ರಾಹಕರನ್ನು ಗೌರವಿಸಿ, ಅತೀ ಶೀರ್ಘದಲ್ಲೇ ಸೇವೆ ನೀಡುವಲ್ಲಿ ಸೇವಾ ಸಹಕಾರಿ ಸಂಘಗಳು ಮುಂದಾಗಬೇಕು ಆಗ ಮಾತ್ರ ಸಂಘವು ಯಶಸ್ವಿಹೊಂದಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೆ. ಮೋಹನ ಪೂಜಾರಿ, ಬಿ.ಎಸ್. ಸುರೇಶ ಶೆಟ್ಟಿ, ಗುರುರಾಜ ಹೆಬ್ಬಾರ್ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ ಪೈ ಸ್ವಾಗತಿಸಿ ಬರಮಾಡಿಕೊಂಡರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ಕೆ. ಹಾವಳಿ ಬಿಲ್ಲವ ವಂದಿಸಿದರು. ಸಂಘದ ನೌಕರರು ಸಹಕರಿಸಿದರು.

Leave a Reply

Your email address will not be published. Required fields are marked *

3 × five =