ಖಂಬದಕೋಣೆ-ಹೇರಂಜಾಲು ವಲಯ ಆದಿದ್ರಾವಿಡ ಸಂಘಟನಾ ಸಮಿತಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಹಾನ್ ಪುರುಷ ಡಾ. ಅಂಬೇಡ್ಕರ್‌ರವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ತತ್ವ ಸಿದ್ಧಾಂತಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ವ್ಯವಸ್ಥೆ ಒಕ್ಕೂಟದಲ್ಲಿ ಮುಂದುವರಿಯಬೇಕು. ಈ ದೇಶದ ವ್ಯವಸ್ಥೆಗೆ ಪೂರಕ ವ್ಯವಸ್ಥೆ ಮತ್ತು ಯುವಜನರು ಉತ್ತಮ ಗುಣನಡತೆ, ಪ್ರೀತಿ ವಿಶ್ವಾಸ ಹಾಗೂ ಸೌಹಾರ್ದತೆಯಿಂದ ಜೀವನ ನಡೆಸುವಂತಾಗಬೇಕು ಎಂದು ಬಿಇಒ ಕಛೇರಿಯ ಇ.ಸಿ.ಒ ವೆಂಕಪ್ಪ ಉಪ್ಪಾರ್ ಹೇಳಿದರು.

ಖಂಬದಕೋಣೆ ಪಂಚಾಯತ್ ಸಭಾಭವನದಲ್ಲಿ ಖಂಬದಕೋಣೆ-ಹೇರಂಜಾಲು ವಲಯದ ಆದಿದ್ರಾವಿಡ ಸಂಘಟನಾ ಸಮಿತಿ ಉದ್ಘಾಟಿಸಿ ಮಾತನಾಡಿದರು. ಸಮುದಾಯ ಎಂಬ ಕುಟುಂಬದ ಸದಸ್ಯರು ಹಾಗೂ ಯುವಜನರು ಶೈಕ್ಷಣಿಕವಾಗಿ ಮುಂದುವರಿಬೇಕು. ನಮ್ಮಲ್ಲಿ ಮೌಲ್ಯಯುತ ಶಿಕ್ಷಣದ ಕೊರತೆಯಿದ್ದು, ಜೀವನದಲ್ಲಿ ಉತ್ತಮ ಧ್ಯೇಯೊದ್ಧೇಶದಿಂದ ಕಾರ್ಯಕ್ಷಮತೆ ಕಡಿಮೆಯಾಗದ ಹಾಗೆ ಪ್ರಾಮಾಣಿಕವಾಗಿ ಮುಂದುವರಿಯಬೇಕಿದೆ. ಅನ್ಯ ಸಮಾಜದವರಿಗೆ ಕಿರುಕುಳ ನೀಡುವುದು, ಮೋಸ, ವಂಚನೆ ಮತ್ತು ರಾಜಕೀಯ ಗುಲಾಮಗಿರಿಯಿಂದ ಹಣಗಳಿಸುವ ವಿಚಾರಗಳಿಂದ ಹೊರಬಂದು ಅಂಬೇಡ್ಕರ್ ಅವರ ಚಿಂತನೆಗಳನ್ನು ಸಂಘಟನೆಯ ಮೂಲಕ ಅನುಸರಿಸಿ ಮುಖ್ಯವಾಹಿನಿಗೆ ಸೇರುವಂತಾಗಬೇಕು ಎಂದರು.

ಸಂಘಟನೆಯ ಅಧ್ಯಕ್ಷ ರಾಮ ಬಾಳೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ಮಹೇಂದ್ರ ಪೂಜಾರಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ನರಸಿಂದ ಹಳಗೇರಿ, ವೃತ್ತ ನಿರೀಕ್ಷಕ ರಾಘವ ಸೀತಾರಾಮ ಪಡೀಲ್, ಬೈಂದೂರು ಸಪಪೂ ಕಾಲೇಜಿನ ಉಪಪ್ರಾಂಶುಪಾಲೆ ಜ್ಯೋತಿ ಶ್ರೀನಿವಾಸ್, ಕರಾವಳಿ ಕರ್ನಾಟಕ ಆದಿದ್ರಾವಿಡ ಮಹಾಸಂಘ ಮಂಗಳೂರು ಇದರ ಅಧ್ಯಕ್ಷ ವಿವೇಕಾನಂದ, ಖಂಬದಕೋಣೆ ಗ್ರಾಪಂ ಅಧ್ಯಕ್ಷ ರಾಜೇಶ್ ದೇವಾಡಿಗ, ಸದಸ್ಯ ಗುರುರಾಜ್ ಹೆಬ್ಬಾರ್, ಕೆರ್ಗಾಲು ಗ್ರಾಪಂ ಅಧ್ಯಕ್ಷೆ ಸೋಮು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರವೀಣ್‌ಚಂದ್ರ ಪ್ರಾಸ್ತಾವಿಸಿದರು. ಸುಬ್ರಹ್ಮಣ್ಯ ಸ್ವಾಗತಿಸಿ, ಶಿವಾನಂದ ನಿರೂಪಿಸಿದರು. ಕಾರ್ತಿಕ್‌ರಾಜ್ ವಂದಿಸಿದರು.

Leave a Reply

Your email address will not be published. Required fields are marked *

5 × five =