ಗಂಗೊಳ್ಳಿ : ಕಿಡಿಗೇಡಿಗಳಿಂದ ಮತ್ತೆ ಬೈಕ್‌ಗೆ ಬೆಂಕಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಗಂಗೊಳ್ಳಿಯ ಮೀನು ಮಾರುಕಟ್ಟೆ ರಸ್ತೆ ಸಮೀಪವಿರುವ ಗೋಪಾಲ ಶೇರುಗಾರ್‌ ಅವರ ಮನೆಯ ಮೇಲಂತಸ್ತಿನ ಬಾಡಿಗೆ ಮನೆಯಲ್ಲಿ ವಾಸ್ತವ್ಯ ವಿರುವ ಬದ್ರುದ್ದೀನ್‌ ಅವರು ರಾತ್ರಿ ಕೆಲಸ ಮುಗಿಸಿ ಬಂದು, ಮನೆ ಪಕ್ಕ ನಿಲ್ಲಿಸಿದ್ದ ಪ್ಲಾಟಿನಾ ಬೈಕ್‌ಗೆ ಕಿಡಿಗೇಡಿಗಳು ಮಂಗಳವಾರ ಬೆಳಗ್ಗಿನ ಜಾವ 4.30ರ ಸುಮಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ರವಿವಾರ ತಡರಾತ್ರಿ ನಡೆದ ಬೈಕ್‌ಗೆ ಬೆಂಕಿಯಿಕ್ಕಿದ ಕೃತ್ಯದ ಬಳಿಕ ಮತ್ತೂಂದು ಬೈಕ್‌ಗೆ ಬೆಂಕಿ ಹಚ್ಚಿ ಸುಡಲು ಯತ್ನಿಸಿದ ಘಟನೆ ಮಂಗಳವಾರ ಬೆಳಗ್ಗಿನ ಜಾವ ಸಂಭವಿಸಿದೆ.

Call us

Call us

ಗಂಗೊಳ್ಳಿಯ ಮೀನು ಮಾರುಕಟ್ಟೆ ರಸ್ತೆ ಸಮೀಪವಿರುವ ಗೋಪಾಲ ಶೇರುಗಾರ್‌ ಅವರ ಮನೆಯ ಮೇಲಂತಸ್ತಿನ ಬಾಡಿಗೆ ಮನೆಯಲ್ಲಿ ವಾಸ್ತವ್ಯ ವಿರುವ ಬದ್ರುದ್ದೀನ್‌ ಅವರು ರಾತ್ರಿ ಕೆಲಸ ಮುಗಿಸಿ ಬಂದು, ಮನೆ ಪಕ್ಕ ನಿಲ್ಲಿಸಿದ್ದ ಪ್ಲಾಟಿನಾ ಬೈಕ್‌ಗೆ ಕಿಡಿಗೇಡಿಗಳು ಮಂಗಳವಾರ ಬೆಳಗ್ಗಿನ ಜಾವ 4.30ರ ಸುಮಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಮನೆ ಮಾಲಕ ಗೋಪಾಲ ಶೇರು ಗಾರ್‌ ಮೂತ್ರ ವಿಸರ್ಜನೆಗೆಂದು ಎದ್ದಾಗ ಮನೆ ಹೊರಗಿನಿಂದ ಸುಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ಹೊರ ಬಂದು ನೋಡಿ ದಾಗ ಬೈಕ್‌ ಹೊತ್ತಿ ಉರಿಯುತ್ತಿತ್ತು. ಕೂಡಲೇ ಅವರು ನೀರೆರಚಿ ಬೆಂಕಿ ನಂದಿಸಿದ್ದಾರೆ. ಬಳಿಕ ಮನೆ ಯವರು ಪೊಲೀಸರಿಗೆ ತಿಳಿಸಿ ದ್ದಾರೆ. ಬದ್ರುದ್ದೀನ್‌ ಅವರು ಗಂಗೊಳ್ಳಿ ಮ್ಯಾಂಗನೀಸ್‌ ರಸ್ತೆಯಲ್ಲಿ ಮೊಬೈಲ್‌ ಶಾಪ್‌ ಹೊಂದಿದ್ದಾರೆ. ಬೈಕ್‌ ಭಾಗಶಃ ಹಾನಿಗೀಡಾಗಿದ್ದು, ಸ್ಥಳಕ್ಕಾಗಮಿಸಿದ ಗಂಗೊಳ್ಳಿ ಪೊಲೀಸರು ಬೈಕನ್ನು ಠಾಣೆಗೆ ಕೊಂಡೊಯ್ದಿದ್ದಾರೆ.
ಕಳೆದ ಒಂದು ವಾರದಿಂದ ಮುಸ್ಲಿಂ ಸಮುದಾಯದವರ ಬೈಕ್‌ಗಳಿಗೆ ಬೆಂಕಿ ಹಾಗೂ ಮನೆ, ಕಟ್ಟಡಗಳಿಗೆ ಕಲ್ಲು ತೂರಾಟ ನಡೆಸುತ್ತಿರುವ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮುಸ್ಲಿಂ ವರ್ತಕರು ಅಂಗಡಿ ಗಳನ್ನು ಮುಚ್ಚಿ ಕೆಲಕಾಲ ಬಂದ್‌ ನಡೆಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿಗಳು ಸ್ಥಳಕ್ಕಾಗಮಿಸಿ, ಮನವಿ ಸ್ವೀಕರಿಸ ಬೇಕು ಎಂದು ಮುಸ್ಲಿಂ ಸಂಘಟನೆಗಳು ಆಗ್ರಹಿಸಿದ್ದು, ಎಸ್‌ಪಿ ಬರುವುದಾಗಿ ಡಿವೈಎಸ್‌ಪಿ ಸಮಾಧಾನಪಡಿಸಿದ ಬಳಿಕ ವರ್ತಕರು ಪ್ರತಿಭಟನೆ ಹಿಂಪಡೆದರು.

Call us

Call us

ಗುಂಪು ಚದುರಿಸಿದ ಪೊಲೀಸರು
ರಾತ್ರಿ ವೇಳೆ ನಡೆಯುತ್ತಿರುವ ಕಿಡಿಗೇಡಿಗಳ ದುಷ್ಕೃತ್ಯವನ್ನು ಖಂಡಿಸಿ ಪಿಎಫ್‌ಐ ಗಂಗೊಳ್ಳಿ ಘಟಕಾಧ್ಯಕ್ಷ ತಬ್ರೇಜ್‌ ನೇತೃತ್ವದ ಯುವಕರ ತಂಡ ಸ್ಥಳದಲ್ಲಿ ಜಮಾಯಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಪ್ರವೀಣ್‌ ನಾಯ್ಕ ನೇತೃತ್ವದ ಪೊಲೀಸರ ತಂಡ ಗುಂಪನ್ನು ಚದುರಿಸಿದೆ.

ಪತ್ತೆಗೆ ಕ್ರಮ: ಡಿವೈಎಸ್‌ಪಿ
ಆರೋಪಿ ಗಳನ್ನು ಪತ್ತೆಹಚ್ಚಿ ಬಂಧಿ ಸಲು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಶಾಂತಿ ಕಾಪಾಡಲು ಎಲ್ಲರೂ ಸಹ ಕರಿಸ ಬೇಕು ಎಂದು ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಪ್ರವೀಣ್‌ ನಾಯ್ಕ ಮನವಿ ಮಾಡಿ ಕೊಂಡಿದ್ದಾರೆ.ಪದೇ ಪದೇ ಶಾಂತಿಭಂಗಕ್ಕೆ ಯತ್ನ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಸೂಕ್ಷ್ಮ ಘಟನೆಗಳಿಂದ ದುಷೆøàರಿತರಾಗಿ ಗಂಗೊಳ್ಳಿಯಲ್ಲಿಯೂ ಕೆಲವು ಕಿಡಿಗೇಡಿಗಳು ಕೋಮು ಸೌಹಾರ್ದ ಕೆಡಿಸಲು ಪ್ರಯತ್ನಿಸು ತ್ತಿರು ವುದು ಕಿಡಿಗೇಡಿಗಳ ಸರಣಿ ದುಷ್ಕೃತ್ಯ ಗಳಿಂದ ಸ್ಪಷ್ಟವಾಗಿದೆ. ರವಿವಾರ ತಡ ರಾತ್ರಿ ಗಂಗೊಳ್ಳಿಯ ಅಬ್ದುಲ್‌ ಮಜೀದ್‌ ಅವರ ಬೈಕ್‌ಗೆ ಬೆಂಕಿ ಹಾಕಿ ಸಂಪೂರ್ಣ ಸುಟ್ಟು ಹಾಕಲಾಗಿತ್ತು. ಅದಕ್ಕೂ ಮುನ್ನ ಕಟ್ಟಡ ವೊಂದಕ್ಕೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳನ್ನು ಪುಡಿಗೈಯ್ಯಲಾಗಿತ್ತು.

ಬಿಗಿ ಬಂದೋಬಸ್ತ್; ಎಸ್ಪಿ ಭೇಟಿ
ಮುಂಜಾಗ್ರತಾ ಕ್ರಮವಾಗಿ ಅಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಗಂಗೊಳ್ಳಿಯಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ಡಿವೈಎಸ್‌ಪಿ ಪ್ರವೀಣ್‌ ನಾಯ್ಕ, ಕುಂದಾಪುರ ಸಂಚಾರಿ ಠಾಣೆಯ ಎಸ್‌ಐ ಸುಬ್ಬಣ್ಣ, ಬೈಂದೂರು ಪೊಲೀಸ್‌ ವೃತ್ತ ನಿರೀಕ್ಷಕ ಪರಮೇಶ್ವರ ಗುಣಗಿ, ಡಿಸಿಐಬಿ ಇನ್ಸ್‌ಪೆಕ್ಟರ್‌ ಸಂಪತ್‌ ಕುಮಾರ್‌ ಮೊದಲಾದವರು ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ್‌ ನಿಂಬರ್ಗಿ ಅವರು ಮಂಗಳವಾರ ಗಂಗೊಳ್ಳಿಗೆ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

Leave a Reply

Your email address will not be published. Required fields are marked *

8 − 1 =