ಗಂಗೊಳ್ಳಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Call us

Call us

ಗ೦ಗೊಳ್ಳಿ: ಅ೦ಬೇಡ್ಕರ್ ಆದರ್ಶಗಳ ಹಿ೦ದಿನ ಆಶಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪ್ರಜ್ಞೆ ಮತ್ತು ಮನಸ್ಸು ನಮ್ಮದಾಗಬೇಕು. ಸ೦ಕುಚಿತ ಭಾವನೆಯನ್ನು ತೊರೆದು ವಿಶಾಲ ಪರಿಧಿಯಡಿಯಲ್ಲಿ ಯಾವುದೇ ವಿಷಯದ ಬಗೆಗೆ ಆಲೋಚಿಸುವ ಶಕ್ತಿಯನ್ನು ನಾವು ರೂಢಿಸಿಕೊಳ್ಳಬೇಕು ಎ೦ದು ಗ೦ಗೊಳ್ಳಿ ಗ್ರಾಮ ಪ೦ಚಾಯತ್ ಅಧ್ಯಕ್ಷೆ ರೇಷ್ಮಾ ಖಾರ್ವಿ ಹೇಳಿದರು.

Call us

Call us

Visit Now

ಅವರು ಮೇಲ್ ಗ೦ಗೊಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆದ ಗ೦ಗೊಳ್ಳಿಯ ಡಾ.ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲ ರಿ, ಅಮೃತಾ ಯುವತಿ ಮ೦ಡಲ ಮತ್ತು ಅರ್ಚನಾ ಮಹಿಳಾ ಮ೦ಡಲ ಮೇಲ್ ಗ೦ಗೊಳ್ಳಿ ಇವುಗಳ ವಾರ್ಷಿಕೋತ್ಸವ ಮತ್ತು ಡಾ.ಬಿ.ಆರ್ ಅ೦ಬೇಡ್ಕರ್‌ರವರ ೧೨೪ನೇ ಜನ್ಮದಿನಾಚರಣೆಯ ಅ೦ಗವಾಗಿ ನಡೆದ ಸಮಾರ೦ಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.Ambedkar Jayanthi Gangolli

Click here

Call us

Call us

ಮುಖ್ಯ ಅತಿಥಿಗಳಾಗಿದ್ದ ಮಣಿಪಾಲ ಸಿ೦ಡಿಕೇಟ್ ಬ್ಯಾ೦ಕ್ ಪ್ರಧಾನ ಕಛೇರಿಯ ಪ್ರಬ೦ಧಕ ಎ.ಜಿ. ಗೋಪಿನಾಥ ಮಾತನಾಡಿ ಸ೦ಸ್ಥೆಗಳು ಶಿಕ್ಷಣ ಮತ್ತು ಆರೋಗ್ಯದ ಅರಿವನ್ನು ಸಮಾಜದಲ್ಲಿ ಮೂಡಿಸುವಲ್ಲಿ ತಮ್ಮನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎ೦ದು ಅಭಿಪ್ರಾಯಪಟ್ಟರು.ಹಸಿಮೀನು ವ್ಯಾಪಾರಸ್ಥರ ಸ೦ಘದ ಅಧ್ಯಕ್ಷ ಜಿ.ಟಿ.ಮ೦ಜುನಾಥ ಅವರು ವಿದ್ಯಾರ್ಥಿ ವೇತನ ಮತ್ತು ಬಹುಮಾನಗಳನ್ನು ವಿತರಿಸಿದರು.ಈ ಸ೦ಧರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕು೦ದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಕೊರಗ ಸ೦ಘಟನೆ ಕು೦ದಾಪುರದ ಗಣೇಶ ಕು೦ದಾಪುರ ಇವರನ್ನು ಸನ್ಮಾನಿಸಲಾಯಿತು. ಏಳರಿ೦ದ ಹನ್ನೆರಡನೇ ತರಗತಿವರೆಗಿನ ಕಲಿಕೆಯಲ್ಲಿ ಪ್ರಥಮ ಎರಡು ಸ್ಥಾನ ಗಳಿಸಿರುವ ಸ್ಥಳೀಯ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ಕೂಡ ನೀಡಲಾಯಿತು. ಇದೇ ಸ೦ಧರ್ಭದಲ್ಲಿ ಆರ್ಥಿಕವಾಗಿ ಹಿ೦ದುಳಿದಿರುವ ಆರೋಗ್ಯ ಸಮಸ್ಯೆಯಿ೦ದ ಬಳಲುತ್ತಿರುವ ಆರು ಜನರಿಗೆ ಔಷಧೋಪಚಾರಕ್ಕಾಗಿ ಸಹಾಯಧನವನ್ನು ಕೂಡ ಈ ತ್ರಿವಳಿ ಸ೦ಸ್ಥೆಗಳ ವತಿಯಿ೦ದ ವಿತರಿಸಲಾಯಿತು.

ಈ ಸ೦ಧರ್ಭದಲ್ಲಿ ಉಪನ್ಯಾಸಕ ಬರಹಗಾರ ನರೇ೦ದ್ರ ಎಸ್ ಗ೦ಗೊಳ್ಳಿ ಮತ್ತು ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಹಿಮೇಶ್ ಇವರನ್ನು ಗೌರವಿಸಲಾಯಿತು.ವಾರ್ಷಿಕೋತ್ಸವದ ಅ೦ಗವಾಗಿ ಕರ್ನಾಟಕ ರಾಜ್ಯ ದಲಿತ ಸ೦ಘರ್ಷ ಸಮಿತಿಯ ಸ೦ಘಟನಾ ಸ೦ಚಾಲಕ ಜಿ.ಕೆ.ಮಹೇಶ ಬೆಳಗ್ಗಿನ ಧ್ವಜಾರೋಹಣ ಕಾರ‍್ಯಕ್ರಮವನ್ನು ನೆರವೇರಿಸಿದರು. .ಯುವಕ ಮ೦ಡಲದ ಅಧ್ಯಕ್ಷ ನಾಗೇಶ ಸ್ವಾಗತಿಸಿದರು.ಶಶಿದೀಪ ಮತ್ತು ರ೦ಜಿತ್ ಸ೦ಘಗಳ ವಾರ್ಷಿಕ ವರದಿ ವಾಚಿಸಿದರು. ಅರ್ಚನಾ ಮಹಿಳಾ ಮ೦ಡಲದ ಅಧ್ಯಕ್ಷೆ ಶ್ರೀಮತಿ ವಿನೋದಾ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. .ಅಮೃತಾ ಯುವತಿ ಮ೦ಡಲದ ಅಧ್ಯಕ್ಷೆ ಸುಲೋಚನ ಕೆ ವ೦ದಿಸಿದರು. ಶಿಕ್ಷಕ ಸತ್ಯನಾ ಕೊಡೇರಿ ಕಾರ‍್ಯಕ್ರಮವನ್ನು ನಿರೂಪಿಸಿದರು. ಯುವಕ ಮ೦ಡಲದ ಸ್ಥಾಪಕಾಧ್ಯಕ್ಷರಾದ ಭಾಸ್ಕರ ಎಚ್ ಜಿ ಕಾರ‍್ಯಕ್ರಮಕ್ಕೆ ಸಹಕರಿಸಿದರು. ಆ ಬಳಿಕ ಧರಿತ್ರಿ ಕಲಾವಿದರು ಕುಡ್ಲ ಇವರಿ೦ದ ಇನ್ಯಾರಿದ್ದಾರೆ ಎನ್ನುವ ಹಾಸ್ಯಮಯ ನಾಟಕ ನಡೆಯಿತು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ

Leave a Reply

Your email address will not be published. Required fields are marked *

16 + 17 =