ಗಂಗೊಳ್ಳಿಯಲ್ಲಿ ಕಲೈಕಾರ್ ವಸ್ತು ಪ್ರದರ್ಶನ ಭವನಕ್ಕೆ ಭರದ ಕಾಮಗಾರಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಜಿಲ್ಲಾ ಸ್ವಾತಂತ್ರ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಾಚೀನ ವಸ್ತು ಸಂಗ್ರಹಕಾರ, ಚುಟುಕು ಸಾಹಿತಿ ಗಂಗೊಳ್ಳಿಯ ಜಿ.ಬಿ. ಕಲೈಕಾರ್ ಅವರು ಮುಂದಿನ ಪೀಳಿಗೆಗಾಗಿ ಗಂಗೊಳ್ಳಿಯ ಶ್ರೀ ಕಲೈಕಾರ್ ಮಠದ ಬಳಿಯಲ್ಲಿ ಸುಮಾರು ೧೬ ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ’ಕಲೈಕಾರ್ ವಸ್ತು ಪ್ರದರ್ಶನ ಭವನ’ದ ಕಾಮಗಾರಿ ಭರದಿಂದ ಸಾಗುತ್ತಿದೆ.

Call us

Call us

Call us

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ನ ಕುಂದಾಪುರ ಘಟಕದ ಅಧ್ಯಕ್ಷರಾಗಿರುವ ಜಿ.ಬಿ.ಕಲೈಕಾರ್ ಅವರು ರಚಿಸಿದ ವ್ಯಂಗ್ಯ ಚಿತ್ರಗಳು, ಚುಟುಕು ಸಾಹಿತ್ಯಗಳು ಹಾಗೂ ಇವರು ಸೆರೆ ಹಿಡಿದ ಛಾಯಾಚಿತ್ರಗಳು ವಿವಿಧ ಪ್ರಮುಖ ದಿನಪತ್ರಿಕೆಗಳಲ್ಲಿ, ವಾರ ಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ದೇಶ ವಿದೇಶಗಳ ಅಂಚೆ ಚೀಟಿಗಳು, ಪುರಾತನವಾದ ಛಾಯಾಚಿತ್ರಗಳು, ಕಂಚಿನ ಕಲಾತ್ಮಕ ಪಾತ್ರೆಗಳು, ಹಳೆಯ ದಿನಪತ್ರಿಕೆಗಳು, ದೇಶ ವಿದೇಶಗಳ ಪ್ರಾಚೀನವಾದ ಹಳೆ ನಾಣ್ಯಗಳು, ನೋಟುಗಳು, ಹಳೆಯ ಗಡಿಯಾರಗಳು, ಗ್ರಾಮ್‌ಫೋನ್ (ಎಚ್.ಎಂ.ವಿ.), ಕಲಾತ್ಮಕವಾದ ಮದ್ಯ ತುಂಬಿದ ಬಾಟಲಿಗಳು, ಪಂಚಲೋಹದ ವಿಗ್ರಹಗಳು, ಹಳೆಯ ವಿದೇಶಿ ಕ್ಯಾಮರಾಗಳು, ಹಳೆ ಕಾಲದ ವಿವಿಧ ಬಗೆಯ ಬೀಗಗಳು, ಪೌಂಟಿನ್ ಪೆನ್ನು ಇತ್ಯಾದಿಗಳು ಕಲೈಕಾರ್ ಅವರ ಸಂಗ್ರಹದಲ್ಲಿದೆ.

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಕಲೈಕಾರ್‌ರ ಸಂಗ್ರಹದಲ್ಲಿರದ ವಸ್ತುವಿಲ್ಲ. ಇವರ ಮನೆಯೇ ಒಂದು ವಸ್ತು ಸಂಗ್ರಹಾಲಯ ಎಂಬಂತಾಗಿದೆ. ದಿನನಿತ್ಯ ಎಂಬಂತೆ ಕಲಾಸಕ್ತರು ಇವರ ಮನೆಗೆ ಭೇಟಿ ನೀಡಿ ಇವರ ಸಂಗ್ರಹದಲ್ಲಿರುವ ವಸ್ತುಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಾಚೀನ ವಸ್ತುಗಳ ಸಂಗ್ರಹಣೆ ಒಂದು ಸಂಸ್ಕೃತಿಯ ಕೊಂಡಿಯನ್ನು ಮುಂದಿನ ತಲೆಮಾರುಗಳಿಗೆ ತಲುಪಿಸುವ ದೃಷ್ಟಿಯಿಂದ ಅವುಗಳು ಕಟ್ಟಿಕೊಡುವ ಇತಿಹಾಸ ಮುಂದಿನ ಪೀಳಿಗೆಗೆ ದೊರಕಿಸಿ ಕೊಡುವ ಉದ್ದೇಶದಿಂದ ಕಲೈಕಾರ್ ವಸ್ತು ಪ್ರದರ್ಶನ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿ.ಬಿ.ಕಲೈಕಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

17 + fourteen =