ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದ್ಧ ಕುಡಿಯುವ ನೀರಿನ ಘಟಕ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸೋಮವಾರ ಕೊಡುಗೆಯಾಗಿ ನೀಡಲಾಯಿತು.

ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಎಂ. ಜಿ. ಹಾಗೂ ಹಿರಿಯ ಸದಸ್ಯ ಎಚ್. ಗಣೇಶ ಕಾಮತ್ ಜಂಟಿಯಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಅಮಿತಾ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ರಾಜೇಶ್ ಎಂ.ಜಿ., ಈ ಮೊದಲಿನಿಂದಲೂ ಪರಿಸರದ, ಸಮಾಜದ ಹಲವು ಬೇಡಿಕೆಗಳಿಗೆ, ಅಗತ್ಯತೆಗಳಿಗೆ ಸ್ಪಂದನೆ ನೀಡಿರುವ ರೋಟರಿ ಸಂಸ್ಥೆ ಇಂದು ಕೂಡ ಆರೋಗ್ಯ ಕೇಂದ್ರದ ಅಗತ್ಯತೆಯನ್ನು ಮನಗಂಡು ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದೇವೆ. ಮುಂದೆಯೂ ಸ್ಪಂದನೆ ನೀಡುವುದಾಗಿ ಹೇಳಿದರು. ಸಹ ಪ್ರಾಯೋಜಕ ಎಚ್. ಗಣೇಶ ಕಾಮತ್ ಅವರನ್ನು ಗೌರವಿಸಲಾಯಿತು. ವಲಯ ಸೇನಾನಿ ಕೆ.ರಾಮನಾಥ್ ನಾಯಕ್, ಕಾರ್ಯದರ್ಶಿ ನಾರಾಯಣ ನಾಯ್ಕ್, ರೋಟರಿ ಸದಸ್ಯರಾದ ಜನಾರ್ಧನ ಪೂಜಾರಿ, ಆಸ್ಪತ್ರೆ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

eighteen + one =