ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಪರಿಸರ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಜಾಗೃತಿ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಭಂಡಾರ್‌ಕರ್ಸ್ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಶಾಲಿನಿ ಉಡುಪ ಮಾತನಾಡಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಸಮಾಜ ಎನ್ನುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ. ಆದರೆ ನಾವು ನಮ್ಮ ದಿನನಿತ್ಯದ ಬಳಕೆಯಲ್ಲಿ ಪ್ಲಾಸ್ಟಿಕನ್ನು ಮಿತವಾಗಿ ಬಳಸಿ ಪರಿಸರಕ್ಕೆ ಸಾಧ್ಯವಾದಷ್ಟು ಹಾನಿಯಾಗದ ರೀತಿಯಲ್ಲಿ ನೋಡಿಕೊಳ್ಳುವಂತಹ ಕಾರ‍್ಯವನ್ನು ತಪ್ಪದೇ ಮಾಡಬೇಕಿದೆ.ಆ ಮೂಲಕ ಮತ್ತಷ್ಟು ಸುಂದರ ಪರಿಸರದ ನಿರ್ಮಾಣಕ್ಕೆ ಕಾರಣರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪರಿಸರದ ರಕ್ಷಣೆ ಎಂದರೆ ಅದು ನಮ್ಮ ರಕ್ಷಣೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಆ ನಿಟ್ಟಿನಲ್ಲಿ ಪ್ರತೀ ಮನೆಯಲ್ಲೂ ಮನಸುಗಳಲ್ಲೂ ಈ ಬಗೆಗೆ ಜಾಗೃತಿ ಮೂಡಬೇಕಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿ ಪ್ರತಿನಿಧಿಗಳಾದ ದರ್ಶನ್, ಮಂಜುನಾಥ, ಶ್ವೇತಾ, ಸೃಷ್ಟಿ, ರುತು, ಮತ್ತು ಯಶ್ರಾ ಪರಿಸರ ಸಂರಕ್ಷಣೆಯ ಕುರಿತಂತೆ ವಿಚಾರಗಳನ್ನು ಮಂಡಿಸಿ ನಮ್ಮ ದಿನನಿತ್ಯದ ಸಣ್ಣ ಪುಟ್ಟ ಚಟುವಟಿಕೆಗಳಲ್ಲಿಯೂ ಕೂಡ ಪರಿಸರಕ್ಕೆ ಪೂರಕವಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಇರುವ ಪರಿಸರವನ್ನು ರಕ್ಷಿಸಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆಯಾಗಬೇಕು ಎಂದು ಹೇಳಿದರು

ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ವಿದ್ಯಾಲಯ ಸಂಸ್ಥೆಗಳ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಶುಭ ಹಾರೈಸಿದರು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಶ್ವೇತಾ ಸ್ವಾಗತಿಸಿದರು. ಸಂಜನಾ ಕಾರ‍್ಯಕ್ರಮ ನಿರೂಪಿಸಿದರು. ರಶ್ವಿತಾ ವಂದಿಸಿದರು.

 

Leave a Reply

Your email address will not be published. Required fields are marked *

twelve − ten =