ಗಂಗೊಳ್ಳಿ ಎಸ್.ವಿ. ಕಾಲೇಜು: ಆದರ್ಶ ವಿದ್ಯಾರ್ಥಿನಿಗೆ ಗೌರವ

Call us

ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ 2014-15ನೇ ಸಾಲಿನ ಶಾಲೆಯ ಆದರ್ಶ ವಿದ್ಯಾರ್ಥಿನಿ ಸುನೀತಾ ಪೂಜಾರಿ ಅವರಿಗೆ ಬಾಂಡ್ಯ ರಾಮರಾಮ ಪೈ ಸ್ಮಾರಕ ಅವರ ಮಕ್ಕಳಾದ ಬಾಂಡ್ಯ ಪಾಂಡುರಂಗ ಪೈ ಮತ್ತು ಸಹೋದರರಿಂದ ಕೊಡಲ್ಪಟ್ಟ ಚಿನ್ನದ ಪದಕ ಹಾಗೂ ಬಾಂಡ್ಯ ವರದಾ ಪೈ ಸ್ಮಾರಕ ಅವರ ಮಕ್ಕಳಾದ ಬಾಂಡ್ಯ ಪಾಂಡುರಂಗ ಪೈ ಮತ್ತು ಸಹೋದರರಿಂದ ಕೊಡಲ್ಪಟ್ಟ ನಿಧಿಯನ್ನು ನೀಡಿ ಗೌರವಿಸಲಾಯಿತು.

Call us

Call us

ಇತ್ತೀಚಿಗೆ ಜರಗಿದ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೆನರಾ ಬ್ಯಾಂಕಿನ ನಿವೃತ್ತ ಸೀನಿಯರ್ ಮ್ಯಾನೇಜರ್ ಬಾಂಡ್ಯ ಪಾಂಡುರಂಗ ಪೈ ಬೆಂಗಳೂರು ಅವರು ನೀಡಿ ಗೌರವಿಸಿದರು. ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್, ಸುರತ್ಕಲ್‌ನ ಶ್ರೀನಿವಾಸ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಭರತ್ ಕುಮಾರ್ ಭಟ್ ಕಾಲೇಜಿನ ಪ್ರಾಂಶುಪಾಲ ಆರ್.ಎನ್.ರೇವಣ್‌ಕರ್, ಶಾಲೆಯ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಾಮನದಾಸ ಭಟ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

three − two =