ಗಂಗೊಳ್ಳಿ : ವಿಶ್ವಸಾಗರ ಕ್ರಿಕೆಟರ್ಸ್ ಮತ್ತು ಸಹರಾ ಕ್ರಿಕೆಟರ್ಸ್ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ 30 ಗಜಗಳ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟ ಶನಿವಾರ ಗುಜ್ಜಾಡಿ ಶಾಲಾ ವಠಾರದಲ್ಲಿ ಜರಗಿತು.
ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಶುಭ ಹಾರೈಸಿದರು. ಗುಜ್ಜಾಡಿ ಗ್ರಾಪಂ ಅಧ್ಯಕ್ಷ ಹರೀಶ ಮೇಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ನಾಗರಾಜ ಖಾರ್ವಿ, ಸಹರಾ ಕ್ರಿಕೆಟರ‍್ಸ್‌ನ ಅಧ್ಯಕ್ಷ ಚೇತನ್ ಆರ್ಕಾಟಿ, ವಿಶ್ವಸಾಗರ ಕ್ರಿಕೆಟರ‍್ಸ್‌ನ ಅಧ್ಯಕ್ಷ ಅಕ್ಷಯ ಖಾರ್ವಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಚೇತನ ಖಾರ್ವಿ ಸ್ವಾಗತಿಸಿದರು. ಸಉಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ರೋಹಿತ್ ಆರ್ಕಾಟಿ ವಂದಿಸಿದರು. ಉಡುಪಿ ಜಿಲ್ಲೆಯ ಸುಮಾರು ೨೫ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದೆ.