ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಹರಿ ಓಂ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಜರಗಿದ ಗಂಗೊಳ್ಳಿ ಜಿಎಸ್‌ಬಿ ಪ್ರೀಮಿಯರ್ ಲೀಗ್ ಪಂದ್ಯಾಟದಲ್ಲಿ ಗಂಗೊಳ್ಳಿಯ ವಿ.ಕೆ. ಪೊವಾಸ್ ತಂಡ ಪ್ರಥಮ ಸ್ಥಾನ ಗಳಿಸಿ ಹರಿಓಂ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಭಾನುವಾರ ಸಂಜೆ ನಡೆದ ಫೈನಲ್ ಪಂದ್ಯಾಟದಲ್ಲಿ ವಿ.ಕೆ. ಪೊವಾಸ್ ತಂಡ ಗಂಗೊಳ್ಳಿಯ ಕಾರ್ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ವಿ.ಕೆ. ಪೊವಾಸ್ ತಂಡ ತಾನಾಡಿದ ಎಲ್ಲಾ ಲೀಗ್ ಹಂತದ ಪಂದ್ಯಗಳನ್ನು ಗೆದ್ದು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದರೆ, ಕಾರ್ ಸೂಪರ್ ಕಿಂಗ್ಸ್ ತಂಡವು ವಿ.ವಿ. ಫೈಟರ‍್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಕಾರ್ ಸೂಪರ್ ಕಿಂಗ್ಸ್ ತಂಡದ ವಿಜೇತ ಪಡಿಯಾರ್ ಉತ್ತಮ ದಾಂಡಿಗ, ವಿ.ಕೆ. ಪೊವಾಸ್ ತಂಡದ ಪ್ರದೀಪ ಭಟ್ ಉತ್ತಮ ಎಸೆತಗಾರ ಮತ್ತು ವಿ.ಕೆ. ಪೊವಾಸ್ ತಂಡದ ಶ್ರೇಯಸ್ ಶೆಣೈ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಪಂದ್ಯಾಟದ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಜಿ.ವೆಂಕಟೇಶ ನಾಯಕ್, ಯು.ನಾರಾಯಣ ಪೈ, ಎಚ್.ಸುನೀಲ್ ನಾಯಕ್, ಶಾಲೆಯ ಮುಖ್ಯ ಶಿಕ್ಷಕ ಜಿ.ವಿಶ್ವನಾಥ ಭಟ್, ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್‌ನ ರಮೇಶ ಶೆಣೈ ಮಣಿಪಾಲ, ಸರ್ವೋತ್ತಮ ಕಿಣಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಉದ್ಘಾಟನೆ : ಪುರೋಹಿತರಾದ ಜಿ. ರಾಘವೇಂದ್ರ ಆಚಾರ್ಯ ಪಂದ್ಯಾಟವನ್ನು ಉದ್ಘಾಟಿಸಿದರು. ಜಿ.ಗಂಗಾಧರ ಪೈ, ಎನ್.ಮಾಧವ ಕಿಣಿ, ಜಿ.ವಿಠಲ ಶೆಣೈ, ರವಿರಾಜ್ ನಾಯಕ್, ವಿನಾಯಕ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಎಂ.ನಾಗೇಶ ಪೈ ಸ್ವಾಗತಿಸಿದರು. ಜಿ.ಸುದರ್ಶನ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.