ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ: ಆರ್‌ಟಿಸಿ ವಿತರಣಾ ಸೇವೆ ಆರಂಭ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ನೂತನವಾಗಿ ಆರ್‌ಟಿಸಿ ವಿತರಣಾ ಸೇವೆ ಆರಂಭಿಸಲಾಯಿತು.

Call us

Call us

Visit Now

ಈ ಸೇವೆಗೆ ಚಾಲನೆ ನೀಡಿದ ಕುಂದಾಪುರ ಉಪವಿಭಾಗಾಧಿಕಾರಿ ಟಿ.ಭೂಬಾಲನ್ ಮಾತನಾಡಿ ಪಹಣಿ ಪತ್ರದ ಗಣೀಕರಣ ವ್ಯವಸ್ಥೆಯಲ್ಲಿ ನಮ್ಮ ಇತರ ರಾಜ್ಯಗಳಿಗೆ ರೋಲ್ ಮಾಡೆಲ್ ಆಗಿದೆ. ಆರ್‌ಟಿಸಿ ವ್ಯವಸ್ಥೆಯ ಬಗ್ಗೆ ರಾಜ್ಯ ಸರಕಾರ ಹೆಚ್ಚು ಗಮನಹರಿಸಿ ಗಣೀಕರಣಗೊಳಿಸಿರುವುದರಿಂದ ಸಾರ್ವಜನಿಕರು ಸುಲಭವಾಗಿ ಆರ್‌ಟಿಸಿಯನ್ನು ಪಡೆಯಲು ಸಾಧ್ಯವಾಗುತ್ತಿದೆ. ವಿಕೇಂದ್ರಿಕರಣ ವ್ಯವಸ್ಥೆಯಿಂದ ಪಹಣಿ ಪತ್ರವನ್ನು ಆನ್‌ಲೈನ್‌ನಲ್ಲಿ ದೊರೆಯುವ ವ್ಯವಸ್ಥೆ ಮಾಡಿರುವುದರಿಂದ ಸಾರ್ವಜನಿಕರು ತಾಲೂಕು, ನಾಡ ಕಛೇರಿಗಳಿಗೆ ಪ್ರತಿದಿನ ಅಲೆಯುವುದು ತಪ್ಪಿದೆ. ಈ ವ್ಯವಸ್ಥೆಯಿಂದ ಕಂದಾಯ ಇಲಾಖೆ ಮೇಲೆ ಒತ್ತಡ ಕೂಡ ಕಡಿಮೆಯಾಗಿದೆ ಎಂದು ಹೇಳಿದರು.

Click Here

Click here

Click Here

Call us

Call us

98 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯಲ್ಲಿ ಸಾರ್ವಜನಿಕರ ಹಾಗೂ ರೈತರ ಅನುಕೂಲತೆ ಕಲ್ಪಿಸುವ ಉದ್ದೇಶದಿಂದ ಆರ್‌ಟಿಸಿ ವಿತರಣೆ ಸೇವೆಯನ್ನು ಪ್ರಾರಂಭಿಸಿರುವು ಶ್ಲಾಘನೀಯ. ಪ್ರಸಕ್ತ ವರ್ಷದಲ್ಲಿ ಒಂದು ಕೋಟಿ ರೂ. ಲಾಭ ಗಳಿಸಿರುವ ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಸ್ಥಳೀಯ ಪ್ರದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಸಹಕಾರಿಯು ಜನರಿಗೆ ಇನ್ನಷ್ಟು ಸೇವೆಯನ್ನು ಒದಗಿಸುವ ಮೂಲಕ ಉತ್ತಮವಾಗಿ ಬೆಳವಣಿಗೆ ಹೊಂದುವಂತಾಗಲಿ ಎಂದು ಸಹಕಾರಿಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.

ಸದಸ್ಯರ ಉಳಿತಾಯ ಖಾತೆಯ ಕಂಪ್ಯೂಟರೀಕೃತ ಪಾಸ್ ಪುಸ್ತಕದ ಉದ್ಘಾಟನೆ ನೆರವೇರಿಸಿದ ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್ ಶುಭಾಶಂಸನೆಗೈದರು. ಇದೇ ಸಂದರ್ಭ ಪ್ರಾಕೃತಿಕ ವಿಕೋಪ ನಿಧಿಗೆ ೧೦ ಸಾವಿರ ರೂ.ಗಳ ಚೆಕ್‌ನ್ನು ಹಸ್ತಾಂತರಿಸಲಾಯಿತು. ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿಯ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ಜಿ.ವೆಂಕಟೇಶ ಶೆಣೈ, ಜಿ.ಉದಯಶಂಕರ ರಾವ್, ವತ್ಸಲಾ ಎಸ್.ಕಾಮತ್, ಮಾಲಾ ಕೆ.ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಸಹಕಾರಿಯ ನಿರ್ದೇಶಕ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಜಿ.ವೆಂಕಟೇಶ ನಾಯಕ್ ವಂದಿಸಿದರು.

 

Leave a Reply

Your email address will not be published. Required fields are marked *

one × five =