ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಉಡುಪಿ ಜಿಲ್ಲಾ ಪಂಚಾಯತ್,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಗ್ರಾಮ ಪಂಚಾಯತ್ ಬೀಜಾಡಿ ಹಾಗು ಮಿತ್ರ ಸಂಗಮ (ರಿ) ಬೀಜಾಡಿ ಗೋಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಯುವಜನ ಮೇಳದಲ್ಲಿ ಗಂಗೊಳ್ಳಿಯ ಡಾ. ಅಂಬೇಡ್ಕರ್ ಯುವಕ ಮಂಡಲ (ರಿ) ಗೀಗಿ ಪದ ,ಲಾವಣಿ,ಕೋಲಾಟ, ವೀರಗಾಸೆ, ರಂಗಗೀತೆ, ಜಾನಪದ ನೃತ್ಯ ,ಭಜನೆ, ಜನಪದ ಗೀತೆ, ಚರ್ಮ ವಾದ್ಯ ವೀಭಾಗದಲ್ಲಿ ಪ್ರಥಮ, ಏಕಪಾತ್ರಾಭಿನಯದಲ್ಲಿ ದ್ವಿತೀಯ ಮತ್ತು ಭಾವಗೀತೆಯಲ್ಲಿ ತೃತೀಯ ಸ್ಥಾನ ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.
ಗಂಗೊಳ್ಳಿ: ಡಾ. ಅಂಬೇಡ್ಕರ್ ಯುವಕ ಮಂಡಲಕ್ಕೆ ಸಮಗ್ರ ಪ್ರಶಸ್ತಿ
