ಗಂಗೊಳ್ಳಿ: ದಿನಸಿ ಸಾಮಾಗ್ರಿ ವಿತರಿಸಿ ದೀಪಾವಳಿ ಆಚರಣೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ದೀಪಾವಳಿ ಹಬ್ಬವನ್ನು ಸಂತೋಷದಿಂದ ಸಂಭ್ರಮದಿಂದ ಆಚರಿಸುವ ಉದ್ದೇಶದಿಂದ ಗಂಗೊಳ್ಳಿಯ ಉದ್ಯಮಿ ಭಾಸ್ಕರ ವಿಠಲ ಶೆಣೈ ಅವರ ಕುಟುಂಬದ ಸದಸ್ಯರು ಗಂಗೊಳ್ಳಿಯ ಸುಮಾರು ಹತ್ತಕ್ಕೂ ಮಿಕ್ಕಿ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

Call us

Call us

ಗಂಗೊಳ್ಳಿಯಲ್ಲಿರುವ ಅನೇಕ ಬಡ ಕುಟುಂಬಗಳು ಇಂದಿಗೂ ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿವೆ. ಹಬ್ಬಹರಿದಿನಗಳನ್ನು ಆಚರಿಸಿಕೊಳ್ಳಲು ಬಹಳ ಕಷ್ಟಪಡುತ್ತಿದ್ದು, ಇತರರಂತೆ ದೀಪಾವಳಿ ಹಬ್ಬವನ್ನು ಸಂತೋಷದಿಂದ ಸಂಭ್ರಮದಿಂದ ಆಚರಿಸಿಕೊಳ್ಳಬೇಕು. ನಮ್ಮಂತೆ ಇತರರು ಸಂತೋಷದಿಂದ ಹಬ್ಬದ ಸವಿಯನ್ನು ಸವಿಯುವಂತಾಗಬೇಕು ಎಂಬ ಕಳಕಳಿಯಿಂದ ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಭಾಸ್ಕರ ಶೆಣೈ ಅವರು ಭಾನುವಾರ ಗಂಗೊಳ್ಳಿಯ ವಿವಿಧೆಡೆ ತೆರಳಿ ಸುಮಾರು ೧೨ ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿ ಮತ್ತು ಸಿಹಿತಿಂಡಿಯನ್ನು ವಿತರಿಸಿ ದೀಪಾವಳಿ ಹಬ್ಬದ ಶುಭ ಕೋರಿದರು.

ಪಟಾಕಿ ಕೊಳ್ಳುವುದರಿಂದ ಹಣ ಪೋಲು, ಪಟಾಕಿ ಸುಡುವುದರಿಂದ ಆರೋಗ್ಯವೂ ಹಾಳು. ದೀಪಾವಳಿ ಬೆಳಕಿನ ಹಬ್ಬವೇ ಹೊರತು ಪಟಾಕಿಗಳ ಹೆಸರಿನಲ್ಲಿ ಹಣವನ್ನು ಪೋಲು ಮಾಡುವ ಹಬ್ಬವಲ್ಲ. ಪಟಾಕಿ ಕೊಳ್ಳುವ ಬದಲು ಆ ಹಣವನ್ನು ಅನೇಕ ಬಡ ಕುಟುಂಬಗಳ ಅಗತ್ಯತೆಗಳಿಗೆ ನೀಡುವ ಮೂಲಕ ಅರ್ಥಪೂರ್ಣವಾಗಿ ದೀಪಾವಳಿ ಆಚರಿಸುವಲ್ಲಿ ಮುಂದಿನ ಪೀಳಿಗೆ ನೆರವಾಗಬೇಕು ಎಂದರು.

Call us

Call us

ಪತ್ರಕರ್ತ ಬಿ.ರಾಘವೇಂದ್ರ ಪೈ, ಜಿ.ವಜ್ರೇಶ್ ವಿ.ಶೆಣೈ, ಗಿರೀಶ ಖಾರ್ವಿ, ಉದಯ ಗಾಣಿಗ ಕ್ರಾಂತಿ ವೀರರ ಅಭಿಮಾನಿ ಬಳಗದ ಯಶವಂತ ಖಾರ್ವಿ, ನವೀನ ಖಾರ್ವಿ, ಮಹೇಶ ಖಾರ್ವಿ, ಅನಿಲ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

eighteen + 14 =