ಗಂಗೊಳ್ಳಿ ಪೊಲೀಸ್ ಆಶ್ರಯದಲ್ಲಿ ಏಕತೆಗಾಗಿ ಓಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಂಗೊಳ್ಳಿ ಪೊಲೀಸ್ ಸಾರ್ವಜನಕರೊಡಗೂಡಿ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಮಂಗಳವಾರ ’ಏಕತೆಗಾಗಿ ಓಟ’ ಹಮ್ಮಿಕೊಂಡಿದ್ದರು.

ಓಟದ ಆರಂಭದಲ್ಲಿ ಮಾತನಾಡಿದ ಎಸ್‌ಐ ಬಿ. ಸುಬ್ಬಣ್ಣ ಅಕ್ಟೋಬರ್ ೩೧ ಸ್ವತಂತ್ರ ಭಾರತದ ಮೊದಲ ಗೃಹ ಸಚಿವ, ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಜನ್ಮದಿನ. ನೂರಾರು ಆಳರಸರ ನಡುವೆ ಹರಿಹಂಚಿಹೋಗಿದ್ದ ಭಾರತವನ್ನು ಒಂದುಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ್ದ ಹೈದರಾಬಾದ್ ನಿಜಾಮರ ವಿರುದ್ಧ ಪೊಲೀಸ್ ಕಾರ್ಯಾಚರಣೆ ಆದೇಶಿಸಿ ಹೈದರಾಬಾದ್ ಸಂಸ್ಥಾನವನ್ನೂ ಅವರು ಮಣಿಸಿದ್ದರು. ದೇಶದ ಸಮಗ್ರತೆ ಮತ್ತು ಏಕತೆಗೆ ಅವರ ಸಮಯೋಚಿತ ಮತ್ತು ದಿಟ್ಟ ನಿರ್ಧಾರಗಳು ನಿರ್ಣಾಯಕವೆನಿಸಿದ್ದುವು. ಜಿಲ್ಲಾ ಪೊಲೀಸ್ ವರಿಷ್ಠ ಡಾ. ಸಂಜೀವ್ ಪಾಟೀಲ್ ಅವರ ನಿರ್ದೇಶನದಂತೆ ಪಟೇಲರ ಜನ್ಮದಿನದಂದು ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದರ ಜತೆಗೆ ಇಂದಿನ ಜನ ಸಮುದಾಯಕ್ಕೆ ಅದರ ಮಹತ್ವವನ್ನು ಸಾರುವ ಉದ್ದೇಶದಿಂದ ಏಕತೆಗಾಗಿ ಓಟ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಎಸ್‌ಐ ರಘುರಾಮ್, ಹೆಡ್ ಕಾನ್‌ಸ್ಟಬಲ್ ಸಲೀಂ, ಆನಂದ, ಯೋಗೇಶ್, ಪಿಸಿಗಳಾದ ರವಿಚಂದ್ರ, ಚೇತನ್, ನರಸಿಂಹ, ರಮೇಶ, ನಾಗರಿಕರಾದ ಪ್ರದೀಪ ಆಚಾರ್ಯ, ರೋನಿ, ಗಣೇಶ, ಪ್ರದೀಪ ಪೂಜಾರಿ, ಮಣಿ, ಚಂದ್ರ, ಇತರರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

twelve − one =