ಗಂಗೊಳ್ಳಿ: ಬೋಟಿನಿಂದ ನೀರಿಗೆ ಬಿದ್ದು ಕಾರ್ಮಿಕ ಸಾವು, ಶವಕ್ಕಾಗಿ ಶೋಧ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಬೋಟಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವ ಊಟ ಮುಗಿಸಿ ಕೈತೊಳೆಯುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದ ಘಟನೆ ತಾಲೂಕಿನ ಗಂಗೊಳ್ಳಿ ಬಂದರು ಪ್ರದೇಶದಲ್ಲಿ ವರದಿಯಾಗಿದೆ. ನಾಗೂರಿನ ರಾಜು ಮೊಗವೀರ(50) ಮೃತ ದುರ್ದೈವಿ.

Call us

Call us

Visit Now

ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯಲ್ಲಿನ ಲಂಗರು ಪ್ರದೇಶದಲ್ಲಿ ನಿಂತಿದ್ದ ಬೋಟಿನಲ್ಲಿ ರಾತ್ರಿ ಊಟ ಮುಗಿಸಿದ ರಾಜು ಮೊಗವೀರ ಕೈ ತೊಳೆದುಕೊಳ್ಳುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದರು. ಇದನ್ನು ಗಮನಿಸಿದ ಬೋಟಿನ ಸಿಬ್ಬಂಧಿಗಳು ಸಂಬಂಧಪಟ್ಟವರಿಗೆ ಕೂಡಲೇ ವಿಷಯ ಮುಟ್ಟಿಸಿದರಾದರೂ ರಾತ್ರಿ ವೇಳೆಯಾದ್ದರಿಂದ ಎಲ್ಲಿ ಬಿದ್ದದ್ದರೂ ಎಂದು ಪತ್ತೆಹಚ್ಚಲಾಗಲಿಲ್ಲ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಶದ ಸಿಬ್ಭಂಧಿಗಳು ಸ್ಥಳೀಯರೊಂದಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಆದರೆ ಈವರೆಗೆ ಮೃತರ ಶವ ಪತ್ತೆಯಾಗಿಲ್ಲ. ಗಂಗೊಳ್ಳಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

Click here

Call us

Call us

Gangolli boat worker fall into river  (1)

Leave a Reply

Your email address will not be published. Required fields are marked *

two × 5 =