ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ನಮ್ಮ ನಮ್ಮಲ್ಲಿನ ಜಾತಿ ತಾರತಮ್ಯವನ್ನು ಹೋಗಲಾಡಿಸಿ ಭಗವದ್ಗೀತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಏಕತೆಯಿಂದ ನೆಮ್ಮದಿಯ ಜೀವನ ನಡೆಸಲು ಪ್ರಯತ್ನಿಸಬೇಕು. ನಮ್ಮ ಸಮೃದ್ಧ ಜೀವನಕ್ಕೆ ಬೇಕಾಗುವ ಎಲ್ಲಾ ವಿಷಯಗಳನ್ನು ಹಾಗೂ ಸದ್ವಿಚಾರಗಳನ್ನು ಹೊಂದಿರುವ ಹಿಂದುಗಳ ಪರಮ ಪವಿತ್ರವಾದ ಭಗವದ್ಗೀತೆ ಎಲ್ಲರ ಮನೆ ಮನಗಳಲ್ಲಿ ನೆಲೆಸುವಂತಾಗಬೇಕು ಎಂದು ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಭಾಸ್ಕರ ಶೆಣೈ ಹೇಳಿದರು.
ಅವರು ಗಂಗೊಳ್ಳಿಯ ಮಲ್ಯರಬೆಟ್ಟು ಶ್ರೀ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವೃತಾಚರಣೆ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಭಗವದ್ಗೀತಾ ಅಭಿಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಚಿಂತಕ ಮಂಗೇಶ ಶೆಣೈ ಅವರು ಭಗವದ್ಗೀತೆಯ ಮಹಿಮೆ ಮತ್ತು ಅದನ್ನು ಪಠಿಸುವ ಬಗ್ಗೆ ಪ್ರವಚನ ನೀಡಿದರು. ವರಮಹಾಲಕ್ಷ್ಮೀ ವೃತಾಚರಣೆ ಸಮಿತಿ ಅಧ್ಯಕ್ಷೆ ಅನಿತಾ ಪುಂಡಲೀಕ ಖಾರ್ವಿ, ಕಾರ್ಯದರ್ಶಿ ಜಯಂತಿ ಹರೀಶ ಖಾರ್ವಿ, ಜತೆ ಕಾರ್ಯದರ್ಶಿ ಸಾವಿತ್ರಿ ಖಾರ್ವಿ ಹಾಗೂ ವರಮಹಾಲಕ್ಷ್ಮೀ ವೃತಾಚರಣೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಜಿ.ವಿಠಲ ಶೆಣೈ ಕಾರ್ಯಕ್ರಮ ಆಯೋಜಿಸಿದ್ದರು. ದೇವಳದ ಆಡಳಿತ ಮಂಡಳಿಯ ಜಿ.ಪುರುಷೋತ್ತಮ ಆರ್ಕಾಟಿ ಸ್ವಾಗತಿಸಿದರು. ಮಡಿಕಲ್ ಜನಾರ್ದನ ಖಾರ್ವಿ ವಂದಿಸಿದರು.