ಗಂಗೊಳ್ಳಿ: ಮೀನುಗಾರಿಕಾ ಬಂದರು ಕಾಮಗಾರಿಗಳಿಗೆ ಚಾಲನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಂಗೊಳ್ಳಿ ಬಂದರು ಪ್ರದೇಶದ ಅಳಿವೆಯ ಇಕ್ಕಡೆಗಳಲ್ಲಿ ರೂ ೧.೩೯ ಕೋಟಿ ವೆಚ್ಚದಲ್ಲಿ ನಿರ‍್ಮಾಣವಾಗಲಿರುವ ಕೇಂದ್ರ ಪುರಸ್ಕೃತ ತಡಗೋಡೆ ನಿರ‍್ಮಾಣ ಕಾಮಗಾರಿಗೆ ಮೀನುಗಾರಿಕಾ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಗುದ್ದಲಿ ಪೂಜೆ ನೆರವೇರಿಸಿದರು. ಆ ಬಳಿಕ ಮಾತನಾಡಿದ ಅವರು ಈ ಯೋಜನೆಯನ್ನು ಕೇಂದ್ರದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆಸ್ಕರ್ ಫೆರ್ನಾಂಡೀಸ್ ಮತ್ತು ೫೦:೫೦ಕ್ಕೆ ಶಾಸಕ ಕೆ. ಗೋಪಾಲ ಪೂಜಾರಿ ಅವರ ಪ್ರಯತ್ನದ ಫಲವಾಗಿ ಮಂಜೂರಾಗಿತ್ತು. ಇದರ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ೭೫:೨೫ರ ಅನುಪಾತದಲ್ಲಿ ಭರಿಸುತ್ತವೆ. ಆದರೆ ಪ್ರಸಕ್ತ ಕೇಂದ್ರ ಸರಕಾರವು ಈ ಅನುಪಾತವನ್ನು ೫೦:೫೦ಕ್ಕೆ ನಿಗದಿಗೊಳಿಸಿದೆ. ಅಷ್ಟು ಪ್ರಮಾಣದ ಮೊತ್ತವನ್ನು ರಾಜ್ಯ ಸರಕಾರಗಳು ಭರಿಸುವ ಶಕ್ತಿ ಹೊಂದದಿರುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ಮೀನುಗಾರಿಕಾ ಬಂದರು ಕಾಮಗಾರಿಗಳು ನಡೆಯಲಾರವು. ಈ ವಿಚಾರವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ರಾಧಾ ಮೋಹನ್ ಸಿಂಗ್ ಅವರ ಗಮನಕ್ಕೆ ತಂದಿದ್ದೇನೆ. ಸುದೈವವಶಾತ್ ಗಂಗೊಳ್ಳಿಯ ಕಾಮಗಾರಿಗೆ ಹಿಂದಿನ ಅನುಪಾತ ಅನ್ವಯವಾಗಲಿದೆ ಎಂದರು.

Call us

Call us

Call us

ರಾಜ್ಯದ ಮೀನುಗಾರಿಕಾ ಇಲಾಖೆಗೆ ಕಾಯಕಲ್ಪ ನೀಡಲಾಗುತ್ತಿದೆ. ಈಗಾಗಲೇ ಬೋಟ್‌ಗಳ ಕಾರ್ಯಸಾಧ್ಯತಾ ದೃಢೀಕರಣವನ್ನು ಅಡೆತಡೆಯಿಲ್ಲದೆ ನೀಡಲಾಗಿದೆ. ಗಂಗೊಳ್ಳಿಯಲ್ಲಿ ಮೀನುಗಾರರಿಗಾಗಿ ಸೀಮೆ ಎಣ್ಣೆ ಬಂಕ್ ಸ್ಥಾಪಿಸಲಾಗುವುದು. ಇಂದು ಬೈಂದೂರಿನಲ್ಲಿ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ರೂಪಿಸಲಾಗುವುದು ಎಂದರು.

Call us

Call us

ದೇಶಕ್ಕೆ ಅನ್ವಯವಾಗುವ ಮಮೀನುಗಾರಿಕಾ ನೀತಿ ರೂಪಿಸುವ ತಮ್ಮ ಪ್ರಯತ್ನವನ್ನು ಪ್ರಸ್ತಾಪಿಸಿದ ಸಚಿವರು ಮೀನುಗಾರಿಕೆ ಉಳಿಯಬೇಕಾದರೆ ಸಮುದ್ರ ಉಳಿಯಬೇಕು. ಸಮುದ್ರ ಇರುವ ವರೆಗೆ ಮೀನು ಸಿಗುವಂತಾಗಬೇಕಾದರೆ ಮೀನಿನ ಸಂರಕ್ಷಣೆಯಾಗಬೇಕು. ನೂತನ ನೀತಿ ಅದಕ್ಕೆ ಪೂರಕವಾಗಿರಬೇಕು. ರೋಗದ ಚಿಕಿತ್ಸೆಗೆ ನಡೆಸುವ ಶಸ್ತ್ರಕ್ರಿಯೆಯ ಸಂದರ್ಭ ಆಗುವ ನೋವಿನಂತೆ ಮೀನುಗಾರರು ಇದಕ್ಕೆ ಹೊಂದಿಕೊಳ್ಳಬೇಕು ಎಂದು ನುಡಿದರು. ಹಲವು ಮೀನುಗಾರ ಸಂಘಟನೆಗಳು ಸಚಿವರನ್ನು ಸನ್ಮಾನಿಸಿದುವು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಬೈಂದೂರು ಕ್ಷೇತ್ರದ ಉಪ್ಪುಂದದ ಮಡಿಕಲ್‌ನಲ್ಲಿ ರೂ. ೯೦ ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಂದರು ಕಾಮಗಾರಿಗೆ ಆದಷ್ಟು ಶೀಘ್ರ ಸಂಪುಟದ ಅನುಮೋದನೆ ದೊರಕಿಸಿಕೊಡುವಂತೆ ಸಚಿವರನ್ನು ವಿನಂತಿಸಿದರು.

ಮೀನುಗಾರಿಕಾ ಇಲಾಖೆಯ ನಿರ್ದೇಶಕ ಎಚ್. ಎಸ್. ವೀರಪ್ಪ ಗೌಡ, ಜಂಟಿ ನಿರ್ದೇಶಕ ಗಣಪತಿ ಭಟ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಆಡಳಿತ ನಿರ್ದೇಶಕ ವಿ. ಕೆ. ಶೆಟ್ಟಿ, ಕಾರ್ಯಪಾಲಕ ಇಂಜಿನಿಯರ್ ಕೆ. ಆರ್. ದಯಾನಂದ, ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಮೀನುಗಾರ ಪ್ರತಿನಿಧಿಗಳು ಇದ್ದರು. ಜಿ. ಸುಂದರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

11 + two =