ಗಂಗೊಳ್ಳಿ: ಮೃತ ಜ್ಯೋತಿ ಖಾರ್ವಿ ಮನೆಗೆ ಎಸ್ಪಿ ಅಣ್ಣಾಮಲೈ ಭೇಟಿ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ : ಮೈದುನ ಹಾಗೂ ಆಕೆಯ ಪತ್ನಿಯಿಂದ ಕೊಲೆಯಾದ ಗಂಗೊಳ್ಳಿಯ ಉಪ್ಪಿನಕುದ್ರು ಕಳವಿನಬಾಗಿಲು ನಿವಾಸಿ ಜ್ಯೋತಿ ಖಾರ್ವಿ ಮನೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಭೇಟಿ ನೀಡಿ ಸಾಂತ್ವನ ಹೇಳಿದರು.

Call us

Click Here

Click here

Click Here

Call us

Visit Now

Click here

ಘಟನೆ ಬಗ್ಗೆ ಆಕೆಯ ಪತಿ, ತಂಗಿ ಹಾಗೂ ಮನೆಯವರಿಂದ ವಿವರ ಪಡೆದ ಎಸ್ಪಿಯವರು, ಘಟನೆಯ ಆರೋಪಿಗಳ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ. ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದವರು ಇರುವುದರಿಂದ ಪ್ರಕರಣದ ತನಿಖೆಗೆ ಸಹಕಾರಿಯಾಗಲಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಬಗ್ಗೆ ಆಕೆಯ ಮನೆಯವರು ಮಾಡಿದ ಮನವಿಗೆ ಉತ್ತರಿಸಿದ ಅವರು, ಪ್ರಕರಣ ಕೂಲಂಕೂಷ ತನಿಖೆ ನಡೆದು ಆರೋಪ ಸಾಬೀತಾದರೆ ಆರೋಪಿಗಳಿಗೆ 14 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶಗಳಿವೆ. ಜೀವಾವಧಿ ಶಿಕ್ಷೆ ವಿಧಿಸುವ ಬಗ್ಗೆ ನ್ಯಾಯಾಧೀಶರು ಸೂಕ್ತ ತೀರ್ಮಾನ ಪ್ರಕಟಿಸಲಿದ್ದಾರೆ. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಇಲಾಖೆ ಎಲ್ಲಾ ರೀತಿಯ ಕ್ರಮಕೈಗೊಳ್ಳಲಿದೆ ಎಂದರು.

ಕೊಲೆಗೀಡಾದ ಸಂತ್ರಸ್ತ ಕುಟುಂಬಕ್ಕೆ ಸರಕಾರದ ವಿಕ್ಟಿಮ್ ಫಂಡ್‌ನಿಂದ ಮೂರು ಲಕ್ಷ ರೂ. ಪರಿಹಾರ ದೊರೆಯುವ ಅವಕಾಶವಿದ್ದು, ಸರಕಾರದ ಈ ಪರಿಹಾರ ಪಡೆಯಲು ಈ ಬಗ್ಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತಾಲೂಕು ತಹಶೀಲ್ದಾರ್‌ರವಿಗೆ ಸಲ್ಲಿಸಬೇಕು. ಪರಿಹಾರ ದೊರೆಯುವ ಬಗ್ಗೆ ಸಂತ್ರಸ್ತ ಕುಟುಂಬಕ್ಕೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಬಳಿಕ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್ಪಿ ಅಣ್ಣಾಮಲೈ ಅವರು ಇತ್ತೀಚಿಗೆ ನಡೆದ ಸೌಕೂರು ದೇವಸ್ಥಾನದ ಕಳವು ಪ್ರಕರಣ ಬೇಧಿಸಲು ಇಲಾಖೆ ಶ್ರಮಿಸುತ್ತಿದೆ. ದೇವಸ್ಥಾನದಲ್ಲಿ ಕಳವು ಮಾಡಿದ ವ್ಯಕ್ತಿಯ ಸುಳಿವು ದೊರೆತಿಲ್ಲ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮತ್ತು ನೆರೆ ರಾಜ್ಯಗಳಿಂದ ಶಂಕಿತರನ್ನು ತಂದು ವಿಚಾರಣೆ ನಡೆಸಲಾಗಿದೆ. ಆದರೆ ದೇವಳದಲ್ಲಿ ಕಳವು ಮಾಡಿದ ಆರೋಪಿಗಳಿಗೆ ಮತ್ತು ಶಂಕಿತರ ನಡುವೆ ಯಾವುದೇ ಸಾಮ್ಯತೆ ಕಂಡು ಬಂದಿಲ್ಲ. ಖಂಡಿತವಾಗಿಯೂ ಸೌಕೂರು ದೇವಳದ ಕಳವು ಆರೋಪಿಯನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕುಂದಾಪುರ ಸುತ್ತಮುತ್ತ ನಡೆದ ಕೊಲೆ ಪ್ರಕರಣಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಸುಮಾ ಕೊಲೆ ಪ್ರಕರಣವನ್ನು 15 ದಿನಗಳೊಳಗೆ ಬೇಧಿಸಲಾಗುವುದು. ಬೆಳ್ವೆ ಉದಯ ಶೆಟ್ಟಿ ಕೊಲೆ ಪ್ರಕರಣ ಹಾಗೂ ಕುಂದಾಪುರದಲ್ಲಿ ನಡೆದ ಶೂಟೌಟ್ ಪ್ರಕರಣದ ತನಿಖೆಯನ್ನು ಎಎಸ್ಪಿಯವರು ಕೈಗೆತ್ತಿಕೊಂಡಿದ್ದಾರೆ. ಕೋಟದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ತನಿಖೆಯನ್ನು ಸಿಒಡಿ ನಡೆಸುತ್ತಿದೆ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯವು ಸಮರ್ಪಕವಾಗಿ ಅನುಷ್ಠಾನಗೊಳ್ಳದ ಬಗ್ಗೆ ಹಾಗೂ ವಾಹನಗಳ ಹೆಡ್‌ಲೈಡ್‌ನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಉತ್ತರಿಸಿದ ಅವರು ದ್ವಿಚಕ್ರ ವಾಹನದ ಸವಾರನು ಹೆಲ್ಮೆಟ್ ಧರಿಸುವುದು ಕಡ್ಡಾಯ. ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದರ ಬಗ್ಗೆ ಕೊಂಚ ವಿನಾಯತಿ ನೀಡಲಾಗುತ್ತಿದೆ. ವಾಹನಗಳ ಹೆಡ್‌ಲೈಟ್ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳುತ್ತಿದ್ದು, ಈ ಭಾಗದಲ್ಲೂ ಕ್ರಮಕೈಗೊಳ್ಳುವಂತೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.
ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುದರ್ಶನ ಎಂ., ಗಂಗೊಳ್ಳಿ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ವೆಂಕಟೇಶ ಗೊಲ್ಲ ಮೊದಲಾದವರು ಉಪಸ್ಥಿತರಿದ್ದರು.

Call us

????????????????????????????????????
????????????????????????????????????
????????????????????????????????????
????????????????????????????????????
????????????????????????????????????
????????????????????????????????????

Leave a Reply

Your email address will not be published. Required fields are marked *

7 − one =