ಗಂಗೊಳ್ಳಿ ರೋಟರಿ ಅಧ್ಯಕ್ಷರಾಗಿ ಪ್ರದೀಪ್ ಡಿ.ಕೆ ಆಯ್ಕೆ

ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ  2015-16ನೇ ಸಾಲಿನ ಅಧ್ಯಕ್ಷರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಭಿಯಂತರರಾದ ಪ್ರದೀಪ್ ಡಿ.ಕೆ ಆಯ್ಕೆಯಾಗಿದ್ದಾರೆ.  ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೌಕರರ ಸಂಘದ ಅಧ್ಯಕ್ಷರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ.

ರೋಟರಿಯ ಕಾರ್ಯದರ್ಶಿಯಾಗಿ ರಾಘವೇಂದ್ರ ಆರ್ ಭಂಡಾರ್‌ಕರ್ ಆಯ್ಕೆಯಾಗಿದ್ದರೇ, ಮೆಂಬರ್ ಶಿಪ್ ಡೆವೆಲಪ್ ಮೆಂಟ್ ಸಂಚಾಲಕರಾಗಿ ವಾಸುದೇವ ಶೇರುಗಾರ್, ಕ್ಲಬ್ ಸರ್ವಿಸ್ ಗೆ ರಾಮನಾಥ್ ನಾಯಕ್,  ಒಕೇಶನಲ್ ಸರ್ವೀಸ್ ಗೆ ರಾಜೇಶ್ ಎಂ. ಜಿ, ಕಮ್ಯುನಿಟಿ ಸರ್ವಿಸ್ ಡಾ.ಕಾಶಿನಾಥ್ ಪೈ,  ಯೂತ್ ಸರ್ವಿಸ್ ಗೆ ಮಹೇಶ್‌ರಾಜ್ ಪೂಜಾರಿ, ಅಂತರರಾಷ್ಟ್ರೀಯ ಸೇವೆಗಳಿಗೆ ಗಣೇಶ್ ಕಾಮತ್,  ಟಿಆರ್‌ಎಫ್ ಗೆ ಉಮೇಶ್ ಮೇಸ್ತ, ಪೋಲಿಯೋ ಪ್ಲಸ್ ಗೆ ಜನಾರ್ಧನ  ಪೂಜಾರಿ, ಖಜಾಂಚಿಯಾಗಿ ನಾಗರಾಜ್ ಶೆಟ್ಟಿ, ಲಿಟರಸಿ ಚೆಯರ್‌ಮನ್ ಆಗಿ ನಾರಾಯಣ ನಾಯ್ಕ್, ಇಂಟರ್ಯಾಕ್ಟ್  ಚೆಯರ್‌ಮನ್ ಆಗಿ ಅಶೋಕ್ ದೇವಾಡಿಗ, ಬುಲೆಟಿನ್ ಎಡಿಟರ್ ಆಗಿ ಥಾಮಸ್, ಕಲ್ಚರಲ್ ಚೆಯರ್‌ಮನ್ ಆಗಿ ಪ್ರಕಾಶ್ ಪೂಜಾರಿ ಆಯ್ಕೆಯಾದರು.

ಪದಗ್ರಹಣ ಸಮಾರಂಭವು ಜುಲೈ 14ರಂದು ಗಂಗೊಳ್ಳಿ ಎಸ್.ವಿ.ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು ಪದಗ್ರಹಣ ಅಧಿಕಾರಿಯಾಗಿ ಅಸಿಸ್ಟೆಂಟ್ ಗವರ್ನರ್ ಸತೀಶ್.ಎನ್.ಶೇರುಗಾರ್ ಹಾಗು ಮುಖ್ಯ ಅತಿಥಿಗಳಾಗಿ ಅರೆಹೊಳೆ ಸದಾಶಿವ ರಾವ್ ರವರು ಭಾಗವಹಿಸಲಿರುವರು.

Leave a Reply

Your email address will not be published. Required fields are marked *

4 × 4 =