ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳ್ಳಲಿರುವ ಕಾರಂತರ ಬೈಲು ರಸ್ತೆ, 10 ಲಕ್ಷ ರೂ. ವೆಚ್ಚದಲ್ಲಿ ಸುಲ್ತಾನ್ ಮೊಹಲ್ಲಾ ರಸ್ತೆ, 5 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳ್ಳಲಿರುವ ಸುಗ್ಗಿಬೈಲು ಹೋಗುವ ರಸ್ತೆಗೆ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಗುದ್ದಲಿ ಪೂಜೆ ನೆರವೇರಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯರಾದ ಸುರೇಂದ್ರ ಖಾರ್ವಿ, ರಾಜು ದೇವಾಡಿಗ, ಗಂಗೊಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೀತಾರಾಮ ಶೆಟ್ಟಿ, ಜಿಲ್ಲಾ ಪಂಚಾಯತ್ ಇಂಜಿನಿಯರ್ ರಾಜ್ಕುಮಾರ್, ಗ್ರಾಪಂ ಸದಸ್ಯರಾದ ರೇಷ್ಮಾ ಖಾರ್ವಿ, ಸುಶೀಲ ಶೇರುಗಾರ್, ಸರೋಜಿನಿ, ಕಮಲ, ಯೂನಿಸ್ ಸಾಹೇಬ್, ಅಬ್ದುಲ್ ಹಾದಿ, ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ದುರ್ಗರಾಜ್ ಪೂಜಾರಿ, ಸ್ಥಳೀಯರಾದ ದಿನೇಶ ಪೂಜಾರಿ, ಇಂದಿರಾ ಪೂಜಾರಿ, ನಾಗರಾಜ್ ಶೇರುಗಾರ್, ವಾಸುದೇವ ಶೇರುಗಾರ್, ಪ್ರಕಾಶ ಕಾರಂತ್, ಗುತ್ತಿಗೆದಾರ ಚಂದ್ರ ಖಾರ್ವಿ, ನಿವೃತ್ತ ಮುಖ್ಯೋಪಾಧ್ಯಾಯ ಜಿ.ಮಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.