ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನ: ಗುರುಪೂರ್ಣಿಮಾ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಭಾರತೀಯ ಸನಾತನ ಹಿಂದು ಧರ್ಮದಲ್ಲಿ ಗುರುಪೂರ್ಣಿಮೆಗೆ ವಿಶೇಷ ಮಹತ್ವದ ಸ್ಥಾನವಿದೆ. ಗುರುಗಳ ಆಶೀರ್ವಾದವಿಲ್ಲದೆ ಯಾರೂ ಕೂಡ ಜೀವದಲ್ಲಿ ಯಶಸ್ವಿಯಾಗಲಾರರು ಎಂದು ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನದ ಅಧ್ಯಕ್ಷ ಅರುಣ್ ಕುಮಾರ್ ಜಿ.ಟಿ. ಹೇಳಿದರು.

ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ ಸಭಾಭವನದಲ್ಲಿ ಗುರುಪೂರ್ಣಿಮೆ ಅಂಗವಾಗಿ ಜರಗಿದ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವಸ್ಥಾನದ ಮೊಕ್ತೇಸರ ಸಂಜೀವ ಜಿ.ಟಿ., ಜಿ.ಈಶ್ವರ, ಅರ್ಚಕ ಶಿವ ಜಿ.ಟಿ., ಮಹೇಶ ಜಿ.ಡಿ., ನರಸಿಂಹ ಕೆ., ರಾಘವೇಂದ್ರ ಜಿ.ಟಿ., ಚೇತನ್ ಮತ್ತಿತರರು ಉಪಸ್ಥಿತರಿದ್ದರು. ಅರುಣ್ ಕುಮಾರ್ ಜಿ.ಟಿ. ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಕಾಂತ ಎನ್. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Leave a Reply

Your email address will not be published. Required fields are marked *

9 + five =