ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ವೀರ ವಿಠಲ ಭಜನಾ ಮಂಡಳಿಯ ಸದಸ್ಯರು ಗಂಗೊಳ್ಳಿ ನಿನಾದ ಸಂಸ್ಥೆಯ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಪಂಡರಪುರದ ಶ್ರೀ ವಿಠಲ ರಕುಮಾಯಿ ದೇವಸ್ಥಾನದಲ್ಲಿ ಭಜನಾ ಸೇವೆ ಸಮರ್ಪಿಸಿದರು.
ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ ನೇತೃತ್ವದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಭಜನೆ ನಡೆಸಿದ ಭಜನಾ ಮಂಡಳಿಯ ಸದಸ್ಯರು ಕೆಲ ಕಾಲ ಭಕ್ತರು ಭಾವಪರವಶರನ್ನಾಗಿ ಮಾಡಿದರು. ದೇವಸ್ಥಾನದ ಒಳಗೆ ಭಜನೆ ಮಾಡುವ ಅವಕಾಶ ದೊರೆತಿರುವುದು ಅವಿಸ್ಮರಣೀಯ. ದೇವಸ್ಥಾನದಲ್ಲಿ ಭಜನೆ ನಡೆಸಿದ ಒಂದೊಂದು ಕ್ಷಣ ಕೂಡ ವಿಶಿಷ್ಟ ರೋಮಾಂಚನ ನೀಡಿತ್ತು ಎಂದು ಭಜನಾ ಸೇವೆ ಅರ್ಪಿಸಿದ ಸದಸ್ಯರು ಧನ್ಯತೆಯಿಂದ ನುಡಿದಿದ್ದಾರೆ. ಇಂತಹ ಅದ್ಭುತ ಅವಕಾಶ ಕಲ್ಪಿಸಿದ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.