ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಜಿ.ಎಸ್.ಬಿ.ಮಹಿಳಾ ಮಂಡಳಿ ಗಂಗೊಳ್ಳಿ ಇವರ ವತಿಯಿಂದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ವಿದ್ಯಾಧಿರಾಜ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನದ ತಾಂತ್ರಿಕ ಜಿ.ವಸಂತ ಭಟ್ ಕಲ್ಯಾಣೋತ್ಸವದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ, ಪುರೋಹಿತರಾದ ಜಿ.ವೇದವ್ಯಾಸ ಆಚಾರ್ಯ, ಜಿ.ರಾಘವೇಂದ್ರ ಆಚಾರ್ಯ ಮತ್ತು ಜಿ.ನಾರಾಯಣ ಆಚಾರ್ಯ ಕಲ್ಯಾಣೋತ್ಸವದ ಧಾರ್ಮಿಕ ಅನುಷ್ಠಾನದಲ್ಲಿ ಸಹಕರಿಸಿದರು. ಭಾಂಡ್ಯ ಶ್ರೀಕಾಂತ ಪೈ ದಂಪತಿ ಯಜಮಾನಿಕೆ ವಹಿಸಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಜಿ.ವೆಂಕಟೇಶ ನಾಯಕ್, ಜಿಎಸ್‌ಬಿ ಮಹಿಳಾ ಮಂಡಳಿ ಅಧ್ಯಕ್ಷೆ ನಿರ್ಮಲಾ ಡಿ.ನಾಯಕ್, ಕಾರ್ಯದರ್ಶಿ ವಿಜಯಶ್ರೀ ವಿ.ಆಚಾರ್ಯ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಭಜಕರು, ಸಮಾಜಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದರು.