ಗಂಗೊಳ್ಳಿ: ಶ್ರೀ ಸುಧೀಂದ್ರ ತೀರ್ಥರ ಆರಾಧನಾ ಮಹೋತ್ಸವ

Call us

Call us

ಗಂಗೊಳ್ಳಿ: ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಾದಾನಾಮ ಆರಾಧನೋತ್ಸವದ ಅಂಗವಾಗಿ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ಸಂಕೀರ್ತನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಂದು ಜರಗಿತು.

Call us

Call us

Visit Now

ಮಧ್ಯಾಹ್ನ ಶ್ರೀದೇವರಿಗೆ ವಿಶೇಷ ಪೂಜೆ, ಶ್ರೀಗಳ ಭಾವಚಿತ್ರಕ್ಕೆ ಆರತಿ ಬೆಳಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಂಕೀರ್ತನೆ, ಗುರು ಗುಣಗಾನ, ವಿಶೇಷ ಸಮಾರಾಧನೆಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ವೇದಮೂರ್ತಿ ಜಿ.ಅನಂತಕೃಷ್ಣ ಭಟ್, ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ, ಡಾ.ಕಾಶೀನಾಥ ಪಿ.ಪೈ, ಜಿ.ಶೇಷಗಿರಿ ನಾಯಕ್, ಬಿ.ಸದಾನಂದ ಶೆಣೈ ಮೊದಲಾದವರು ಗುರು ಗುಣಗಾನ ಮಾಡಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಮೋಹನದಾಸ ಭಟ್ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಭಜಕರು ಹಾಗೂ ಜಿಎಸ್‌ಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

Click here

Call us

Call us

Leave a Reply

Your email address will not be published. Required fields are marked *

2 × two =