ಗಂಗೊಳ್ಳಿ ಸೇವಾ ಸಹಕಾರಿ: ಅಮೃತ ಮಹೋತ್ಸವ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸಹಕಾರಿ ಸಂಸ್ಥೆಗಳು ಬೆಳೆಯಬೇಕೆಂದರೆ ಅವು ಸದಸ್ಯರಿಗೆ, ಗ್ರಾಹಕರಿಗೆ ಅಗತ್ಯ ಸೇವೆಗಳನ್ನು ಸುಲಭದಲ್ಲಿ ಒದಗಿಸಬೇಕು. ಅದರ ವ್ಯವಹಾರಗಳು ಪ್ರಾಮಾಣಿಕ ಮತ್ತು ಪಾರದರ್ಶಕ ಆಗಿರಬೇಕು’ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್.ರಾಜೇಂದ್ರಕುಮಾರ್ ಹೇಳಿದರು.

ಅವರು ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್‌ನ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಗಂಗೊಳ್ಳಿ ಪ್ರಧಾನ ಕಚೇರಿ ಮತ್ತು ಮೂರು ಶಾಖೆಗಳ ಮೂಲಕ ಕುಂದಾಪುರ ತಾಲ್ಲೂಕಿನ ಜನರಿಗೆ ಸೇವೆ ನೀಡುತ್ತಿರುವ ಬ್ಯಾಂಕ್, ಮುಂದಿನ 10 ವರ್ಷಗಳಲ್ಲಿ ಇನ್ನೂ 10 ಶಾಖೆಗಳನ್ನು ತೆರೆದು, ರೂ. 100 ಕೋಟಿ ಠೇವಣಿ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.

ಅಮೃತ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಗಂಗೊಳ್ಳಿಯಲ್ಲಿ ವ್ಯವಹಾರ ನಡೆಸುವ ಎಲ್ಲ ಆರ್ಥಿಕ ಸಂಸ್ಥೆಗಳು ಉತ್ತುಂಗಕ್ಕೇರಿವೆ. ಸೇವಾ ಸಹಕಾರಿ ಬ್ಯಾಂಕ್ ಅದೇ ದಾರಿಯಲ್ಲಿದೆ ಎಂದರು. ಬ್ಯಾಂಕ್‌ನಅಧ್ಯಕ್ಷ ಆನಂದ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು.

ಎಂ. ಎನ್.ರಾಜೇಂದ್ರ ಕುಮಾರ್, ಬ್ಯಾಂಕ್ನ ಮಾಜಿ ಅಧ್ಯಕ್ಷರು, ನಿರ್ದೇಶಕರು, ನಿವೃತ್ತ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳ ಜಿ. ಭಾಸ್ಕರ ಕಲೈಕಾರ್, ನಾಗರಾಜ ಖಾರ್ವಿ, ನಿವೃತ್ತ ಕಾರ್ಯದರ್ಶಿ ವಾಸುದೇವ ಐತಾಳ್, ಕೃಷಿಕ ಗೋವಿಂದ ಪೂಜಾರಿ, ಶೇಖರ ಪೂಜಾರಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣಕುಮಾರ್ ಎಸ್.ವಿ. ಅವರನ್ನು ಗೌರವಿಸಲಾಯಿತು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ , ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣಕುಮಾರ್ ಎಸ್.ವಿ. , ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಜಿ. ಪುತ್ರನ್, ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಂದ್ರ ಖಾರ್ವಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಮೊಳಹಳ್ಳಿ ಮಹೇಶ ಹೆಗ್ಡೆ, ಕುಂದಾಪುರ ಎಪಿಎಂಸಿ ಅಧ್ಯಕ್ಷ ಎಚ್. ಹರಿಪ್ರಸಾದ ಶೆಟ್ಟಿ, ಡಾ.ಕಾಶೀನಾಥ ಪೈ, ಜಿ.ಲಕ್ಷ್ಮೀನಾರಾಯಣ ಭಟ್, ಜಿ.ನಾರಾಯಣ ಆಚಾರ್ಯ, ಎಚ್.ಗಣೇಶ ಕಾಮತ್, ಕೆ.ನಾಗರಾಜ ರಾವ್, ಜಾನ್ಸನ್ ಡಿ’ಅಲ್ಮೇಡಾ, ಉಪಾಧ್ಯಕ್ಷ ಜಿ.ವಾಸುದೇವ ಶೇರುಗಾರ್ , ಪ್ರಧಾನ ವ್ಯವಸ್ಥಾಪಕ ದಯಾನಂದ ಗಾಣಿಗ, ನಿರ್ದೇಶಕ ಸುಭಾಶ್ಚಂದ್ರ ಪೂಜಾರಿ ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಇದ್ದರು.

Leave a Reply

Your email address will not be published. Required fields are marked *

two × 2 =