ಗಂಗೊಳ್ಳಿ ಸೇವಾ ಸಹಕಾರಿ: ಅಮೃತ ಮಹೋತ್ಸವದ ಲಾಂಛನ ಬಿಡುಗಡೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಸೇವಾ ಸಹಕಾರಿ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಶುಕ್ರವಾರ ಜರಗಿದ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಮೃತ ಮಹೋತ್ಸವದ ವರ್ಷದ ಲಾಂಛನ ಬಿಡುಗಡೆಗೊಳಿಸಲಾಯಿತು

Call us

ಗಂಗೊಳ್ಳಿಯ ಉದ್ಯಮಿ ಜಿ.ಭಾಸ್ಕರ ವಿಠಲ ಶೆಣೈ ಮಾತನಾಡಿ, ಆರ್ಥಿಕ ಸಂಸ್ಥೆಯ ಬೆಳವಣಿಗೆಯು ಆ ಸಂಸ್ಥೆಯ ಪ್ರಾಮಾಣಿಕತೆ, ವಿಶ್ವಾಸ ಹಾಗೂ ಸೇವೆಯ ಮೇಲೆ ಅವಲಂಬಿತವಾಗಿದೆ. ಕಳೆದ 75 ವರ್ಷಗಳ ಹಿಂದೆ ಪ್ರಾರಂಭಗೊಂಡ ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ ಸದಸ್ಯರ ಅವಶ್ಯಕತೆಗಳಿಗೆ ಸ್ಪಂದಿಸಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸಿಕೊಂಡು ಸದೃಢವಾಗಿ ಬೆಳೆದು ನಿಂತಿದೆ. ಬ್ಯಾಂಕಿನ ಸಂಸ್ಥಾಪಕರ ಆಶಯಗಳಿಗೆ ಅನುಗುಣವಾಗಿ ಮುನ್ನಡೆಯುತ್ತಿರುವ ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ ಸದಸ್ಯರಿಗೆ ಉತ್ತಮ ಸೇವೆ ನೀಡುವ ಮೂಲಕ ಮತ್ತಷ್ಟು ಅಭಿವೃದ್ಧಿ ಹೊಂದುವಂತಾಗಲಿ ಎಂದು ಹೇಳಿದರು.

Call us

ಬ್ಯಾಂಕಿನ ಅಧ್ಯಕ್ಷ ಆನಂದ ಬಿಲ್ಲವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಶುಭ ಹಾರೈಸಿದರು. ಬ್ಯಾಂಕಿನ ಮಾಜಿ ನಿರ್ದೇಶಕ ಚಿಕ್ಕಯ್ಯ ಪೂಜಾರಿ, ನಿರ್ದೇಶಕರಾದ ಹರೀಶ ಮೇಸ್ತ, ಮಾಧವ ಖಾರ್ವಿ, ಸುಭಾಶ್ಚಂದ್ರ ಪೂಜಾರಿ, ಶ್ರೀನಿವಾಸ ಜತ್ತನ್, ಚಂದ್ರಶೇಖರ ಪೂಜಾರಿ, ನಾಗರಾಜ ಪೂಜಾರಿ, ಗೋಪಾಲ ನಾಯ್ಕ್, ಆಶಾಲತಾ, ಯಮುನಾ, ನಾಗರಾಜ ಎಂ., ಲಕ್ಷ್ಮಣ, ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಉಪಾಧ್ಯಕ್ಷ ವಾಸುದೇವ ಶೇರುಗಾರ್ ಸ್ವಾಗತಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ದಯಾನಂದ ಗಾಣಿಗ ವಂದಿಸಿದರು.

Leave a Reply

Your email address will not be published. Required fields are marked *

19 − nine =