ಗಜವರ್ಣ – 2020, ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಧನಾ ಕಲಾ ಸಂಗಮವು ಪ್ರಾರಂಭವಾದಂದಿನಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ಬಹುಮುಖ್ಯ ಚಟುವಟಿಕೆಯಲ್ಲಿ ಒಂದಾದ ಗಜವರ್ಣ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ. ಇದು ಪ್ರತಿ ವರ್ಷ ಗಣೇಶ ಚೌತಿಯ ಸಂದರ್ಭದಲ್ಲಿ ನಡೆಯುವಂತಹ ಸ್ಪರ್ಧೆಯಾಗಿತ್ತು. ಆದರೆ ಈ ವರ್ಷ ಕೊರೋನಾ ಸಾಂಕ್ರಾಮಿಕದ ಕಾರಣ ಈ ಸ್ಪರ್ಧೆಯನ್ನು ನಡೆಸಲಾಗಲಿಲ್ಲ. ಈಗ ನಾವು ಮಹಾಚೌತಿಯ ಅಂದರೆ ಆನೆಗುಡ್ಡೆ ರಥೋತ್ಸವದ ಸಂದರ್ಭದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದಿನಂತೆ ಈ ಸ್ಪರ್ಧೆ ಗಜವರ್ಣ 2020 ಕುಂದಾಪುರ/ಬೈಂದೂರು ತಾಲೂಕು ಮಟ್ಟದ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಜನತೆಗೂ. LKG ಯಿಂದ ಹತ್ತನೆ ತರಗತಿಯ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಸ್ಪರ್ಧೆಯು 5 ವಿಭಾಗಗಳಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಗಣಪತಿ ಚಿತ್ರ ರಚನೆಯನ್ನು ನಿಮ್ಮ ಮನೆಯಲ್ಲಿ ರಚಿಸಿ ತಲುಪಿಬೇಕು.

Click Here

Call us

Call us

ನಿಯಮಗಳು : ಸ್ಪರ್ಧಾಳುಗಳು  21cmx14.50cm ಅಳತೆಯ ಡ್ರಾಯಿಂಗ್ ಹಾಳೆಯಲ್ಲಿ ಗಣಪತಿಯ ಚಿತ್ರವನ್ನು ನಿಮ್ಮ ಮನೆಯಲ್ಲೇ ರಚಿಸಬೇಕು. ಚಿತ್ರದ ಹಿಂಬಾಗದಲ್ಲಿ ಸ್ಪರ್ಧಿಯ ಹೆಸರು ಹಾಗೂ ಫೋನ್ ನಂಬರ್ ಬರೆಯಿರಿ. ಕಪ್ಪು/ಬಿಳುಪು ಅಥವಾ ಪೆನ್ಸಿಲ್‌ನಲ್ಲಿ ಚಿತ್ರ ಬಿಡಿಸುವಂತಿಲ್ಲಾ, ಯಾವುದೇ ತರಹದ ಬಣ್ಣಗಳನ್ನು ಬಳಸಿ ಬಿಡಿಸಬಹುದು. ಎಲ್ಲಾ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ ಹಾಗೂ 2 ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ. ನಮ್ಮ ತೀರ್ಪುದಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಸ್ಪರ್ಧೆಯ ಫಲಿತಾಂಶವನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ ಹಾಗೂ ನಿಮ್ಮ ವಾಟ್ಸಾಪ್ ನಂಬರಕ್ಕೆ ಕಳುಹಿಸಲಾಗುವುದು. ಸ್ಪರ್ಧಿಗಳು ಕುಂದಾಪರ ಹಾಗೂ ಬೈಂದೂರು ತಾಲೂಕಿನ ನಿವಾಸಿಗಳಾಗಿರಬೇಕು. ನೀವು ರಚಿಸಿದ ಚಿತ್ರದೊಂದಿಗೆ ನಿಮ್ಮ ವಿಳಾಸದ ಕುರಿತಾದ ಪ್ರಮಾಣಪತ್ರ, ನಿಮ್ಮ ವಾಟ್ಸಾಪ್ ನಂಬರ್ ಹಾಗೂ ನಿಮ್ಮ Email ID ಆ ಒಂದು ಕಾಗದದಲ್ಲಿ ಬರೆದು ಲಗತ್ತಿಸಿ. ಚಿತ್ರ ಕಲಾವಿದರು ಭಾಗವಹಿಸುವವರು ಈ ಚಿತ್ರವನ್ನು ಹ್ಯಾಂಡ್ ಮೇಡ್ ಹಾಳೆಯಲ್ಲಿ ರಚಿಸಿದರೆ ಉತ್ತಮ, ಹಾಗೂ ಅವರನ್ನು ವಿಶೇಷವಾಗಿ ಗುರುತಿಸಲಾಗುವುದು.

Click here

Click Here

Call us

Visit Now

ಸ್ಪರ್ಧೆಯ ಕೊನೆಯ ದಿನಾಂಕ :12-12-2020, ಹೀಗೆ ರಚಿಸಿದ ಚಿತ್ರವನ್ನು ಕಛೇರಿಗೆ ಡಿಸೆಂಬರ್ 12ನೇ ತಾರೀಕು ಶನಿವಾರದೊಳಗೆ ತಲುಪಿಸಬೇಕು (ಪೋಸ್ಟ ಅಥವಾ ಕೋರಿಯರ್ ಮೂಲಕ ಕಳುಹಿಸಬಹುದು) ಇದರ ಸದವಕಾಶವನ್ನು ಎಲ್ಲಾ ವಿದ್ಯಾರ್ಥಿಗಳು ಹಾಗೂ ಕಲಾಸಕ್ತರು ಉಪಯೋಗಿಸಿಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿಸದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸಾಧನ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರ, 3ನೇ ಮಹಡಿ, ಶ್ರೀ ಕ್ರಷ್ಣಭವನ, ಮುನ್ಸಿಪಲ್ ರಸ್ತೆ, ಕುಂದಾಪುರ 576201 P: 8722739038, 8762436950 EMAIL:sadhanakpr2010@gmail.com  Visit:WWW.SADANAKALASANGAMA.ORG

Leave a Reply

Your email address will not be published. Required fields are marked *

eighteen − 1 =