ಗಾಂಧಿಯ ತತ್ವಗಳನ್ನು ಯುವ ಜನತೆಗೆ ತಲುಪಿಸಿ ಅರ್ಥೈಸಬೇಕಿದೆ: ನರೇಂದ್ರ ಕುಮಾರ್ ಕೋಟ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಗಾಂಧಿಯ ವಿಚಾರಧಾರೆಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಹಲವು ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಎಳೆಯ ಮಕ್ಕಳು ಕೂಡ ತಪ್ಪು ತಪ್ಪಾಗಿ ಗಾಂಧಿಯನ್ನು ತಿಳಿದುಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ ಎಂದು ಶಿಕ್ಷಕ, ಸಂಘಟಕ ನರೇಂದ್ರ ಕುಮಾರ್ ಕೋಟ ಹೇಳಿದರು.

Click here

Click Here

Call us

Call us

Visit Now

Call us

Call us

ಅವರು ಗಾಂಧಿ ವಿಚಾರ ವೇದಿಕೆ ಬ್ರಹ್ಮಾವರ ಘಟಕ, ಕೋಟ ಕ.ಸಾ.ಪ ಕಚೇರಿಯಲಲ್ಲಿ ಏರ್ಪಡಿಸಿದ ಗಾಂಧಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಗಾಂಧಿಗೆ ನುಡಿನಮನ ಸಲ್ಲಿಸಿ ಮಾತನಾಡಿ ಇದಕ್ಕೆ ಸಾಮಾಜಿಕ ಜಾಲತಾಣಗಳ ಪ್ರಭಾವ ಬಹಳಷ್ಟಿದೆ. ಹಿರಿಯರು ಗಾಂಧಿಯ ವಿಚಾರಧಾರೆಗಳನ್ನು ಅರ್ಥಮಾಡಿಕೊಂಡವರು ಗಾಂಧಿಯ ವಿಚಾರಧಾರೆಗಳನ್ನು ಎಳೆಯರಿಗೆ ತಲುಪಿಸಬೇಕಾಗಿದೆ ಸ್ವಾತಂತ್ರ್ಯ ಪೂರ್ವದ ಭಾರತದ ಸಾಮಾಜಿಕ ಸ್ತರವಿನ್ಯಾಸದ ಆಧಾರದಮೇಲೆ ಗಾಂಧಿಯನ್ನು ಯುವ ಜನತೆಗೆ ಅರ್ಥೈಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗಾಂಧಿ ವಿಚಾರವೇದಿಕೆ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಪ್ರೊಫೆಸರ್ ಸಿ ಉಪೇಂದ್ರ ಸೋಮಯಾಜಿಯವರು ಮಾತನಾಡಿ ಪರಿಪೂರ್ಣತೆಗೆ ಬಹಳ? ಹತ್ತಿರವಾಗಿದ್ದ ಗಾಂಧಿ ವಿಚಾರಧಾರೆಗಳು ಸರ್ವಕಾಲಕ್ಕೂ ಸಲ್ಲುವಂತಹದು. ಐನ್ಸ್ಟೈನ್ ಹೇಳಿದಂತೆ ಇಂತಹ ಒಬ್ಬ ವ್ಯಕ್ತಿ ಭೂಮಿಯ ಮೇಲೆ ಜೀವಿಸಿದ್ದ ಅನ್ನೋದು ನಂಬುವುದು ಕಷ್ಟ. ಅಂತಹ ಗಾಂಧಿಯನ್ನು ಯುವ ಜನತೆ ಹಾಗು ಎಳೆಯ ಮಕ್ಕಳಿಗೆ ಹೆಚ್ಚು ಹೆಚ್ಚು ಪರಿಚಯಿಸುವ ಕೆಲಸವಾಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿ?ತ್ತಿನ ಉಡುಪಿ ಜಿಲ್ಲಾಧ್ಯಕ್ಷ ಮತ್ತು ಗಾಂಧಿ ವಿಚಾರ ವೇದಿಕೆ ಮಾತೃ ಸಮಿತಿಯ ಉಪಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಹಿಂದೆ ಆಕಾಶವಾಣಿಯಲ್ಲಿ ಪ್ರಸಾರವಾಗಿದ್ದ ತಮ್ಮ ಗಾಂಧಿ ಸ್ಮೃತಿಯನ್ನು ವಾಚಿಸಿದರು. ಉಪಾಧ್ಯಕ್ಷರಾದ ಎಚ್ ಸೋಮಶೇಖರ್ ಶೆಟ್ಟಿ, ಶ್ರೀಪತಿ ಹೇರ್ಳೆ, ನಾಗೇಶ ಮಯ್ಯ, ರಾಮಚಂದ್ರ ಐತಾಳ್ ಗಾಂಧಿ ಸಂಸ್ಮರಣೆಯನ್ನು ಮಾಡಿದರು. ಪದಾಧಿಕಾರಿಯಾದ ಮಹಾಲಕ್ಷ್ಮಿ ಸೋಮಯಾಜಿ ಗಾಂಧಿ ಪ್ರಾರ್ಥನೆ ಯನ್ನು ಹಾಡಿದರು. ಪದಾಧಿಕಾರಿಯಾದ ಸುಮನಾ ಹೇರ್ಳೆ ಸ್ವಾಗತಿಸಿದರು. ಭಾಸ್ಕರ ಪೂಜಾರಿಯವರು ಧನ್ಯವಾದ ಸಮರ್ಪಿಸಿ ಗಾಂಧಿವಿಚಾರ ವೇದಿಕೆ ಬ್ರಹ್ಮಾವರ ಘಟಕದ ಕಾರ್ಯದರ್ಶಿ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಣೆ ಮಾಡಿದರು.

Call us

Leave a Reply

Your email address will not be published. Required fields are marked *

12 − three =