ಗಾಂಧೀಜಿ ಎಲ್ಲ ದೇಶ, ಕಾಲಗಳಿಗೆ ಪ್ರಸ್ತುತ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಹಾತ್ಮ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಸಹಿಷ್ಣುತೆಯಂತಹ ವಿಚಾರಗಳು ಭಾರತಕ್ಕಷ್ಟೇ ಅಲ್ಲ, ಪ್ರಸಕ್ತ ಕಾಲಘಟ್ಟದಲ್ಲಿ ಇಡೀ ಜಗತ್ತಿಗೆ ಪ್ರಸ್ತುತ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು.

Call us

Call us

Visit Now

ಬೈಂದೂರಿನ ರಂಗಸುರಭಿ ಮತ್ತು ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ ರೋಟರಿ ಸಮುದಾಯ ಭವನದಲ್ಲಿ ಧಾರವಾಡದ ರಂಗಾಯಣ ತಂಡ ’ಗಾಂಧಿ ೧೫೦-ಒಂದು ರಂಗಪಯಣ’ ಭಾಗವಾಗಿ ಭಾನುವಾರ ಪ್ರದರ್ಶಿಸಿದ ಬೊಳುವಾರು ಮಹಮದ್ ಕುಂಞಿ ಅವರ ’ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ರಂಗರೂಪಕವನ್ನು ಅವರು ಉದ್ಘಾಟಿಸಿ ಮಾತನಾಡಿದರು.

Click here

Call us

Call us

ಗಾಂಧೀಜಿ ವ್ಯಕ್ತಿತ್ವ, ಬದುಕು, ಸಂದೇಶ-ಸಾಧನೆಗಳು ನಾಟಕಗಳಲ್ಲಿ ಹಿಡಿದಿಡಲಾಗದಷ್ಟು ಅಗಾಧ ಮತ್ತು ಉತ್ತುಂಗವಾದವುಗಳು. ಆದರೆ ಅವುಗಳನ್ನು ಜನಮನದಲ್ಲಿ ಬಿತ್ತುವ ಕೆಲಸವನ್ನು ಕೆಲಮಟ್ಟಿಗೆ ರಂಗಪ್ರದರ್ಶನಗಳು ಮಾಡಬಹುದಾದ್ದರಿಂದ ಅಂತಹ ಕಾರ್ಯ ಸ್ತುತ್ಯರ್ಹ ಎಂದು ಅವರು ಹೇಳಿದರು.
ರೋಟರಿ ಅಧ್ಯಕ್ಷ ಐ. ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ ಸ್ವಾಗತಿಸಿದರು. ಸುರಭಿಯ ನಿರ್ದೇಶಕ ಕೃಷ್ಣಮೂರ್ತಿ ಉಡುಪ ವಂದಿಸಿದರು. ಸುಧಾಕರ ಪಿ. ಬೈಂದೂರು ನಿರೂಪಿಸಿದರು. ಸುರಭಿಯ ಅಧ್ಯಕ್ಷ ಶಿವರಾಮ ಕೊಠಾರಿ ಇದ್ದರು.

ಪ್ರದರ್ಶನಗೊಂಡ ರೂಪಕದ ಪರಿಕಲ್ಪನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್ ಅವರದು. ರಂಗರೂಪ ಮತ್ತು ನಿರ್ದೇಶನ ಡಾ. ಶ್ರೀಪಾದ ಭಟ್ ಅವರದಾದಿತ್ತು. ಧಾರವಾಡ ರಂಗಾಯಣದ ನಿರ್ದೇಶಕ ಪ್ರಮೋದ್ ಶಿಗ್ಗಾಂವ್ ನಿರ್ವಹಿಸಿದ್ದರು.

Leave a Reply

Your email address will not be published. Required fields are marked *

18 − one =