ಗಾಣಿಗ ಸಂಘದಿಂದ ಭಾಗವತ ಹೆರೆಂಜಾಲು ಗೋಪಾಲ ಗಾಣಿಗರಿಗೆ ಧನಸಹಾಯ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

Call us

Call us

ಬೈಂದೂರು: ಬಡಗುತಿಟ್ಟಿನ ಯಕ್ಷಗಾನ ಭಾಗವತ ಹೆರೆಂಜಾಲು ಗೋಪಾಲ ಗಾಣಿಗ ಅವರ ನಾಗೂರು ಬ್ಯಾಟರಕ್ಲು ನಿವಾಸಕ್ಕೆ ಉಪ್ಪುಂದ ಗಾಣಿಗ ಸೇವಾ ಸಂಘದ ಪದಾಧಿಕಾರಿಗಳು ಭೇಟಿನೀಡಿ ಸಂಘದ ವತಿಯಿಂದ ಅಪಘಾತಕ್ಕೀಡಾದ ಭಾಗವತರ ಚಿಕಿತ್ಸೆಗಾಗಿ ಸಹಾಯಧನ ಚೆಕ್ ನೀಡಿದರು.

ಕಳೆದ ಜನವರಿಯಲ್ಲಿ ಮುಳ್ಳಿಕಟ್ಟೆ ಸಮೀಪ ನಡೆದ ಬೈಕ್ ಅಪಘಾತದಿಂದ ತೀವೃತರಹದಿಂದ ಗಾಯಾಳುಯಾಗಿದ್ದ ಭಾಗವತರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ದೀರ್ಘಕಾಲದ ಚಿಕಿತ್ಸೆಯ ಬಳಿಕ ಮನೆಗೆ ಹಿಂದಿರುಗಿದ್ದರು. ಸದ್ಯ ಎಡಕಾಲು ತೀವೃ ಜರ್ಝರಿತಗೊಂಡು ನಡೆದಾಡಲಾಗದ ಸ್ಥಿತಿಯಲ್ಲಿರುವ ಭಾಗವತರು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಇವರ ನೆರವಿಗೆ ಬಂದ ಕುಂದಾಪುರ ಗಾಣಿಗ ಸೇವಾ ಸಮಿತಿ ಮಾಜಿ ಅಧ್ಯಕ್ಷ ಕೊಲ್ಲೂರು ರಮೇಶ ಗಾಣಿಗ ಮತ್ತು ಬೈಂದೂರು ಘಟಕದ ಅಧ್ಯಕ್ಷ ಬಿ.ಎಂ.ನಾಗರಾಜ ಗಾಣಿಗ ತಮ್ಮ ವೈಯಕ್ತಿಕ ನೆರವು ನೀಡಿ ಭಾಗವತರಿಗೆ ಆತ್ಮಸ್ಥೈರ್ಯ ತುಂಬಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಉಪ್ಪುಂದ ಘಟಕದ ಗೌರವಾಧ್ಯಕ್ಷ ಅನಂತ ಗಾಣಿಗ, ಅಧ್ಯಕ್ಷ ಗಣಪಯ್ಯ ಗಾಣಿಗ, ಉಪಾಧ್ಯಕ್ಷ ಶಿವಾನಂದ ಗಾಣಿಗ, ಕಾರ್ಯದರ್ಶಿ ಆನಂದ ಗಾಣಿಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

1 × 3 =