ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗೀತೆಯ ಸಾರ ಸಕಲರಿಗೂ ಉತ್ತಮ ಜೀವನಕ್ಕೆ ಬೆಳಕು ನೀಡಿದಂತೆ ಶ್ರದ್ಧೆಯಿಂದ ಮಾಡುತ್ತಿರುವ ಗೀತ ಪ್ರಸಾರ ಕಾರ್ಯಕ್ರಮ ಬೈಂದೂರಿನಲ್ಲಿ ಅತಿ ಯಶಸ್ವಿಯಾಗಲು ಇಲ್ಲಿಯ ಕಾರ್ಯಕರ್ತರ ಶ್ರಮ ಅಪಾರ ಎಂದು ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು.
ಅವರು ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀಮದ್ಭಗವದ್ಗೀತಾ ಜಯಂತಿ ಆಚರಣೆ ಸಮಿತಿ ಬೈಂದೂರು ಗೀತಾ ಜಯಂತಿ ಉತ್ಸವ 2021 ಇದರ ವಲಯ ಮಟ್ಟದ ಸ್ಪರ್ಧಾ ಕೂಟದ ಉದ್ಘಾಟಿಸಿ ಮಾತನಾಡಿದರು.
ಶ್ರೀಮದ್ಭಗವದ್ಗೀತಾ ಜಯಂತಿ ಆಚರಣೆ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ಶೇರುಗಾರ್ ಬಿಜೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧಾ ಸಮಿತಿಯ ಮುಖ್ಯಸ್ಥರಾದ ವಿಶ್ವೇಶ್ವರ ಅಡಿಗ ಸ್ಪರ್ಧಾ ನಿಯಮಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಬೈಂದೂರು ರಾಮಕ್ಷತ್ರಿಯ ಸಮಾಜ ಅಧ್ಯಕ್ಷರಾದ ಪರಮೇಶ್ವರ ಹೋಬಳಿದಾರ್, ಬೈಂದೂರು ರತ್ತೂಬಾಯಿ ಜನತಾ ಮುಖ್ಯೋಪಾಧ್ಯಾಯರಾದ ಆನಂದ ಮದ್ದೋಡಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್, ರಾಮಕ್ಷತ್ರಿಯ ಮಾತೃ ಮಂಡಳಿ ಅಧ್ಯಕ್ಷರಾದ ಮಂಜುಳಾ ಶಿವಯ್ಯ, ಸಂಚಾಲಕರಾದ ಹನುಮಂತ ಜಿ ಸಂಘಟಕರಾದ ಬಿ ನಾಗಪ್ಪ ಉಪಸ್ಥಿತರಿದ್ದರು.
ಸಮಿತಿಯ ಕಾರ್ಯದರ್ಶಿಯಾದ ಬಿ. ಕೇಶವ ನಾಯಕ್ ಸರ್ವರನ್ನು ಸ್ವಾಗತಿಸಿದರು. ಮಾತೃ ಮಂಡಳಿಯ ಸದಸ್ಯರು ಪ್ರಾರ್ಥನೆ ಮಾಡಿದರು. ಮಂಜುನಾಥ ಧನ್ಯವಾದ ಸಲ್ಲಿಸಿದರು ಭಾರತಿ ಮಂಜುನಾಥ್ ಮತ್ತು ಲಲಿತ ಕೇಶವ ನಾಯಕ್ ಕಾರ್ಯಕ್ರಮ ನಿರೂಪಿಸಿದರು