ಗುಜ್ಜಾಡಿ: ಸ್ಪಂದನ ಯುವ ಸಂಘ ವಾರ್ಷಿಕೋತ್ಸವ

Call us

ಗಂಗೊಳ್ಳಿ: ಗುಜ್ಜಾಡಿ ಮಂಕಿಯಲ್ಲಿನ ಸ್ಪಂದನ ಯುವ ಸಂಘದ ವಾರ್ಷಿಕೋತ್ಸವ ಸಮಾರಂಭ ಇತ್ತೀಚಿಗೆ ಮಂಕಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು.

Call us

Call us

ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಗುಜ್ಜಾಡಿ ಗ್ರಾಪಂ ಸದಸ್ಯ ತಮ್ಮಯ್ಯ ದೇವಾಡಿಗ ಶುಭಾಶಂಸನೆಗೈದರು. ಇದೇ ಸಂದರ್ಭ ಮಂಕಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಆಶಾಭಾನು ಅವರನ್ನು ಸನ್ಮಾನಿಸಲಾಯಿತು. ಮಂಕಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಶ್ರೀಯಾನ್, ಉಪ್ಪಿನಕುದ್ರು ಶಾಲೆಯ ಮುಖ್ಯೋಪಾಧ್ಯಾಯ ಭಾಸ್ಕರ ಮಯ್ಯ, ಮತ್ಸ್ಯೋದ್ಯಮಿ ಮೋಹನ ಖಾರ್ವಿ ಗಂಗೊಳ್ಳಿ, ಮಂಕಿ ಶಾಲೆಯ ಮುಖ್ಯೋಪಾಧ್ಯಾಯ ಶಂಕರ ಬಿಲ್ಲವ, ಗುಜ್ಜಾಡಿ ಗ್ರಾಪಂ ಸದಸ್ಯೆ ನಿರ್ಮಲಾ ಶೆಡ್ತಿ, ಸ್ಪಂದನ ಯುವ ಸಂಘದ ಮಾರ್ಗದರ್ಶಕರಾದ ಪುಂಡಲೀಕ ಮಂಕಿ ಮತ್ತು ಪರಮೇಶ್ವರ ಶ್ರೀಯಾನ್ ಹಾಗೂ ಸಂಘದ ಅಧ್ಯಕ್ಷ ರಾಘವೇಂದ್ರ ಉಪಸ್ಥಿತರಿದ್ದರು. ಸಚಿನ್ ಆರ್. ಸ್ವಾಗತಿಸಿದರು. ಕಾರ್ಯದರ್ಶಿ ಪ್ರತಾಪ ವರದಿ ವಾಚಿಸಿದರು. ರೇಷ್ಮಾ ಕುಂದರ್ ವಂದಿಸಿದರು.

Leave a Reply

Your email address will not be published. Required fields are marked *

six + ten =