ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇದು ಎಸುವಿನ ಕೊನೆಯ ಭೋಜನದ ದಿನವೂ ಆಗಿದೆ ಅಂದು ಎಸು ಮೂರು ಸಂಸ್ಕಾರ ನೇರವೆರಿಸಿದರು, ಒಂದು ರೊಟ್ಟಿಯ (ಪ್ರಸಾದ) ಸಂಸ್ಕಾರ, ಈ ರೊಟ್ಟಿಯ ಮೂಲಕ ತಾನು ನಮ್ಮ ಜೊತೆಗಿರುತ್ತೇನೆಂದು ವಾಗ್ದಾನ ಮಾಡಿದ ದೀನ, ಎರಡನೆಯದು ತನ್ನ ಶಿಸ್ಯರು, ಅನುಯಾಯಿಗಳು ತಾವು ಸೇವೆ ಮಾಡಿಕೊಳ್ಳುವುದಲ್ಲಾ, ಇತರರ ಸೇವೆ ಮಾಡಬೇಕೆಂದು ಭೋದನೆ ಮಾಡಿದ ದಿನ, ಮೂರನೇಯದು ತನ್ನ ಶಿಸ್ಯರನ್ನು ಯಾಜಕರನ್ನಾಗಿ ಮಾಡಿ ಧರ್ಮಗುರುಗಳ ಸಂಸ್ಕಾರ ಆರಂಭಿಸಿದ ದೀನ, ’ನಾನು ಸೇವೆ ಪಡೆಯಲು ಬಂದಿದ್ದಲ್ಲಾ, ನಾನು ಇತರರ ಸೇವೆ ಮಾಡಲು ಬಂದಿದ್ದು’ ಅಂತಾ ಏಸು ನಮಗೆ ಭೋದನೆ ಮಾಡಿದ್ದಾರೆ, ಅದರಂತೆ ಎಸುವಿನ ಹಿಂಬಾಲಾಕರಾದ ನಾವು ದೀನ ದಲಿತರ, ಅಗತ್ಯ ಇರುವರ ಸೇವೆ ಮಾಡಬೇಕೆನ್ನುತ್ತಾ’ ಕುಂದಾಪುರ ಇಗರ್ಜಿಯ ಪ್ರಧಾನ ಗುರು ವಂ.ಅನಿಲ್ ಡಿಸೋಜಾ ಆರಿಸಲ್ಪಟ್ಟ ಸದಸ್ಯರ ಪಾದ ತೊಳೆಯುವ ಸಂಪ್ರದಾಯವನ್ನು ನೇಡೆಸಿಕೊಟ್ಟರು. ಸಹಾಯಕ ಧರ್ಮಗುರು ವಂ. ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಸಹವರ್ತಿಯಾಗಿ ಈ ಧಾರ್ಮಿಕ ಕ್ರಿಯೆಗಳನ್ನು ನೆಡೆಸಿಕೊಟ್ಟರು