ಗುರುಕುಲ ಪಬ್ಲಿಕ್ ಶಾಲೆಯಲ್ಲಿ ವಕ್ವಾಡಿ ವಿಶ್ವ ಯೋಗ ದಿನಾಚರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅತಿಯಾದ ಕಾರ್ಯಭಾರ, ಮಾನಸಿಕ ಒತ್ತಡ, ಆಧುನಿಕತೆಯ ಸಂಕೀರ್ಣತೆ ಇವೆ ಮುಂತಾದ ಸಾಮಾನ್ಯ ಸಮಸ್ಯೆಗಳು ಪ್ರತಿಯೊಬ್ಬರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಕಾಡುತ್ತಿದೆ. ಸದಾ ಕ್ರೀಯಾಶೀಲಯಾಗಿ ಸರ್ವಾಂಗೀಣ ವ್ಯಕ್ತಿತ್ವದ ವಿಕಾಸ ನಿರಂತರ ಯೋಗ ಅಭ್ಯಾಸದ ಮೂಲಕ ಸಾಧ್ಯ. ವಿದ್ಯಾರ್ಥಿಗಳಲ್ಲಿ ಹಾಗೂ ಯುವಕರಲ್ಲಿ ಕಾಡುವ ಕ್ರೀಯಾಹೀನತೆ ಪರಿಹಾರವಾಗಿ ಯೋಗಾಭ್ಯಾಸ ಪದ್ಧತಿ ಅನಿವಾರ್ಯವಾಗಿದೆ. ಸನಾತನ ಭಾರತೀಯ ಸಂಸ್ಕ್ರತಿ ಯೋಗದ ಮಹತ್ವದ ಬಗ್ಗೆ ವಿಶೇಷವಾದ ಕಾಳಜಿಯನ್ನು ಹಲವು ಮಹನೀಯರ ಮೂಲಕ ನಮಗೆ ಸಂದೇಶವನ್ನು ನೀಡಿದೆ ಎಂದು ಗುರುಕುಲ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಸಾಯಿಜು.ಕೆ.ಆರ್.ನಾಯರ್ ರವರು ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Call us

Call us

Call us

ಈ ಶಾಲೆಯ ಎನ್.ಸಿ.ಸಿ ವಿದ್ಯಾರ್ಥಿಗಳು ಸುಮಾರು ಎರಡು ಗಂಟೆಗಳ ಕಾಲ ವಿಶೇಷ ಯೋಗ ಚಟುವಟಿಕೆಗಳನ್ನು ಮಾಡಿ ತೋರಿಸಿ, ಉಳಿದ ವಿದ್ಯಾರ್ಥಿಗಳಿಗೆ ವಿಶ್ವಯೋಗ ದಿನಾಚರಣೆಯ ಮಹತ್ವತೆಯನ್ನು ಸಾರಿದರು. ಯೋಗಾಸನ, ಕಪಾಲಬಾತಿ, ಪ್ರಾಣಾಯಾಮ ಮತ್ತು ಧ್ಯಾನವನ್ನು ವಿದ್ಯಾರ್ಥಿಗಳು ಕ್ರಮವಾಗಿ ಮಾಡಿ ತೋರಿಸಿದರು. ಅಲ್ಲದೇ ೧೦ನೇ ತರಗತಿಯ ವಿದ್ಯಾರ್ಥಿಗಳು ಸಭಾ ಕಾರ್ಯಕ್ರಮದಲ್ಲಿ ಯೋಗದಿಂದ ಹೇಗೆ ರೋಗಗಳನ್ನು ಮುಕ್ತಿಗೊಳಿಸಲು ಸಾಧ್ಯ? ಹಾಗೂ ಸಧೃಡ ದೇಹದಲ್ಲಿ ಸಧೃಡ ಮನಸ್ಸು ಇರಬೇಕಾದರೆ ಯೋಗಾಭ್ಯಾಸ ಪ್ರಮುಖವಾಗಿರುತ್ತದೆ ಎನ್ನುವುದನ್ನು ತಮ್ಮ ಮಾತಿನ ಮೂಲಕ ಬಣ್ಣಿಸಿದರಲ್ಲದೇ, ೭ ನೇ ತರಗತಿಯ ವಿದ್ಯಾರ್ಥಿಗಳು ಯೋಗದ ಪ್ರಾತಿಕ್ಷ್ಯತೆ ನೀಡಿದರು.

ಸಮಸ್ತ ಜೀವ ಸಂಕುಲಗಳು ಶಾಂತಿಮಯ ಸುಖಜೀವನವನ್ನು ನಡೆಸಲು ಅನುಕೂಲವಾಗುವಂತೆ ಬದುಕುವ ಸಂಕಲ್ಪದೊಂದಿಗೆ ವಿಶ್ವಯೋಗದಿನಾಚರಣೆಯ ಈ ಕಾರ್ಯಕ್ರಮ ಸಂಪನ್ನಗೊಂಡಿತು. ಶಾಲೆಯ ಪ್ರಾಂಶುಪಾಲರಾದ ಶ್ರೀ.ಸಾಯಿಜು.ಕೆ.ಆರ್.ನಾಯರ್, ಉಪಪ್ರಾಂಶುಪಾಲರಾದ ಶ್ರೀ.ಸುನಂದಾ ಪಾಟೀಲ್, ಶಿಕ್ಷಕವೃಂದ ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *

18 − fourteen =