ಗುರುಕುಲ ಪಬ್ಲಿಕ್ ಸ್ಕೂಲ್: ಇಕೊ ಕ್ಲಬ್ ಉದ್ಘಾಟನೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕ್ವಾಡಿಯಲ್ಲಿನ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ‘ಇಕೊ ಕ್ಲಬ್’ ಉದ್ಘಾಟಿಸಲಾಯಿತು. ಮುಖ್ಯ ಅತಿಥಿ ಡಾ. ಎನ್.ಎ ಮಧ್ಯಸ್ಥ ದೀಪ ಬೆಳಗಿಸಿ ಕಾರ‍್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ಮಹತ್ವವನ್ನು ತಿಳಿಸಿದರು. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಹಾಗೂ ಮಾನವನ ಬದುಕಿಗೆ ಆಸರೆಯಾಗಿರುವ ಗಿಡಮರಗಳ ರಕ್ಷಣೆ ಹಾಗೂ ಪೋಷಣೆಯ ಅನಿವಾರ್ಯತೆಯನ್ನು ತಿಳಿ ಹೇಳಿದರು.

Click Here

Call us

Call us

Visit Now

ಗುರುಕುಲ ಕಾಲೇಜಿನ ಪ್ರಾಂಶುಪಾಲರಾದ ಚೆನ್ನಬಸಪ್ಪ ಮಾತನಾಡಿ ವಿದ್ಯಾರ್ಥಿಗಳು ಪರಿಸರ ಸ್ವಚ್ಚತೆಯನ್ನು ಕಾಪಾಡಿಕೊಂಡು ನೈರ್ಮಲ್ಯತೆಯತ್ತ ಗಮನಹರಿಸಲು ತಿಳಿಸಿದರು. ಗುರುಕುಲ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಶ್ರೀ. ಸಾಯಿಜು ನಾಯರ್‌ರವರು ಮಾತನಾಡಿ ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ, ಪ್ರಕೃತಿಯನ್ನು ನಾವು ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.

Click here

Click Here

Call us

Call us

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಾಂಡ್ಯ ಎಜ್ಯುಕೆಶನ್ ಟ್ರಸ್ಟ್‌ನ ಜಂಟಿ ಕಾರ‍್ಯ ನಿರ್ವಹಣಾಧಿಕಾರಿ ಅನುಪಮ ಎಸ್ ಶೆಟ್ಟಿ ಮಾತನಾಡಿ ಔಷಧಿಯ ಸಸ್ಯಗಳ ಮಹತ್ವವನ್ನು ತಿಳಿಸಿದರು. ಕಾರ‍್ಯಕ್ರಮದಲ್ಲಿ ಟ್ರಸ್ಟ್‌ನ ಜಂಟಿ ಕಾರ‍್ಯನಿರ್ವಹಣಾಧಿಕಾರಿ ಸುಭಾಶ್ಚಂದ್ರ ಶೆಟ್ಟಿ ಹಾಗೂ ಶಾಲೆಯ ಉಪಪ್ರಾಂಶುಪಾಲೆ ಸುನಂದಾ ಎಸ್ ಪಾಟೀಲ್‌ರವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗದವರು ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು. ಶಾಲಾ ವಿದ್ಯಾರ್ಥಿಗಳಾದ ಕುಮಾರಿ. ಪ್ರಶಸ್ತಿ ಹಾಗೂ ಕುಮಾರಿ. ಕೃಪಾಶ್ರೀರವರು ಕಾರ‍್ಯಕ್ರಮ ನಿರ್ವಹಿಸಿದರು. ಅಧ್ಯಾಪಕಿ ಶ್ರೀಮತಿ ರಶ್ಮಿ ಸ್ವಾಗತಿಸಿದರು. ಕುಮಾರಿ ಪ್ರೀತಿ ವಂದಿಸಿದರು.

Leave a Reply

Your email address will not be published. Required fields are marked *

fifteen − fifteen =