ಗುರುಕುಲ ಪಬ್ಲಿಕ್ ಸ್ಕೂಲ್: ಯು.ಕೆ.ಜಿ ಮಕ್ಕಳ ಪದವಿ ಪ್ರದಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುರುಕುಲ ಪಬ್ಲಿಕ್ ಶಾಲೆಯ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಕಾರ‍್ಯಕ್ರಮ ಜರುಗಿತು. ಉಡುಪಿ ಎ.ವಿ.ಬಾಳಿಗ ಅಡ್ಮಿನಿಸ್ಟ್ರೇಟರ್ ಶ್ರೀಮತಿ. ಸೌಜನ್ಯ ಶೆಟ್ಟಿ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಬಳಿಕ ಮಾತನಾಡಿ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವವಾಗಿದೆ ಮಕ್ಕಳು ಹಿರಿಯರು ಹೇಳಿದ್ದನ್ನು ಕೇಳುವುದಿಲ್ಲ, ಬದಲಾಗಿ ನಾವು ಮಾಡುವುದನ್ನು ಅನುಕರಣೆ ಮಾಡುತ್ತಾರೆ. ಮಕ್ಕಳ ಮನಸ್ಸು ಹೂವಿನಂತೆ ಮೃದುವಾಗಿರುತ್ತದೆ. ಅವರ ಸೂಕ್ಷ್ಮತೆಗಳನ್ನು ಅರಿತು ಅರ್ಥೈಸಿಕೊಳ್ಳಬೇಕಾಗಿರುವುದು ಪೋಷಕರ ಕರ್ತವ್ಯ. ಮಕ್ಕಳಿಗೆ ಹೊಡೆಯುವುದರಿಂದ ಅವರ ಬೆಳವಣಿಗೆಯ ವ್ಯಕ್ತಿತ್ವವನ್ನು ಚಿವುಟಿದಂತಾಗುತ್ತದೆ. ಆ ನಿಟ್ಟಿನಲ್ಲಿ ಪೋಷಕರು ಶಿಕ್ಷಕರ ಜೊತೆಗೂಡಿ ಸಹಕರಿಸಿದಾಗ ಉತ್ತಮ ಮಕ್ಕಳನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆಯೆಂದು ನುಡಿದರು.

Call us

Call us

Call us

ಈ ಸಂದರ್ಭದಲ್ಲಿ ಬಾಂಡ್ಯ ಶಿಕ್ಷಣಸಂಸ್ಥೆಯ ಜಂಟಿ ಕಾರ‍್ಯನಿರ್ವಾಹಕಿ ಅನುಪಮ. ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲರಾದ ಸಾಯಿಜು ಕೆ. ಆರ್. ನಾಯರ್ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಐಸಿರಿ ಮತ್ತು ವೇದಾಂತ್ ಕಾರ‍್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಆದ್ಯಾ ಶೆಟ್ಟಿ ಸ್ವಾಗತಿಸಿದರು. ಮೂಸಾ ಇಸಾನ್ ವಂದಿಸಿದರು.

Call us

Call us

Leave a Reply

Your email address will not be published. Required fields are marked *

4 × 2 =