ಗುರುಕುಲ ಪುಟಾಣಿಗಳ ಪದವಿ ಪ್ರದಾನ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಯುಕೆಜಿ ಮಕ್ಕಳ ಪದವಿ ಪ್ರದಾನ ಸಮಾರಂಭ ಮಂಗಳವಾರ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ರಶ್ಮಿ ಕುಂದಾಪುರ ಪ್ರೊಫೆಸರ್.ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ಮಂಗಳೂರು ಇವರು ಆಗಮಿಸಿದ್ದರು.

ಈ ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಭಯವಿಲ್ಲದೇ ಎಲ್ಲರ ಮುಂದೆ ಬಂದು ತಮ್ಮ ವಿದ್ಯಾರ್ಥಿ ಜೀವನದ ಅನುಭವ ಹಂಚಿಕೊಳ್ಳುವುದು ನಿಜಕ್ಕೂ ಪ್ರಶಂಸನೀಯ. ಅದರಲ್ಲೂ ಅವರ ನಿಷ್ಕಲ್ಮಶ ನಗು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದೆ. ಅದೇ ರೀತಿ 5 ವರ್ಷದೊಳಗಿನ ಮಕ್ಕಳಿಗೆ ಬೇಕಿರುವುದು ಕೇವಲ ನಮ್ಮ ಪ್ರೀತಿ ಅದನ್ನು ಮಕ್ಕಳು ತಮ್ಮ ಮನೆಯ ಸದಸ್ಯರಿಂದ ಪಡೆಯಬಹುದು ಆದರೆ ಮಕ್ಕಳು ಶಾಲೆಗೆ ಬಂದಾಗ ಸಮಾಜದ ಜೊತೆ ಹೇಗೆ ಬೆರೆಯಬೇಕು ಎಂಬುವುದನ್ನು ಕಲಿಯುವುದರ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಹೊರ ಹಾಕಲು ಶಾಲೆ ಅವರಿಗೆ ವೇದಿಕೆಯನ್ನು ರೂಪಿಸುತ್ತದೆ. ನಂತರ 5ರಿಂದ 10 ವರ್ಷದ ಮಕ್ಕಳಿಗೆ ಪ್ರೀತಿಯ ಜೊತೆಗೆ ಶಿಸ್ತುಬದ್ದ ಜೀವನದ ಕುರಿತು ಸಮರ್ಪಕ ರೀತಿಯಲ್ಲಿ ಮಾಹಿತಿಕೊಟ್ಟಾಗ ಮುಂದೆ ಮಕ್ಕಳು ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಶಾಲಾ ಶಿಕ್ಷಕಿಯರ ಶ್ರಮವನ್ನು ಮೆಚ್ಚಲೇಬೇಕು. ಪ್ರತಿ ಮಗುವಿನ ಜನನದೊಂದಿಗೆ ತಂದೆ – ತಾಯಿಯರಿಗೂ ಕೂಡ ಮರುಜನ್ಮ ಸಿಕ್ಕ ಹಾಗೆ ಏಕೆಂದರೆ ಮಗುವಿನ ಬೆಳವಣಿಗೆಯ ಪ್ರತಿ ಹಂತದಲ್ಲಿ ಅವರು ಕೂಡ ಪ್ರತಿದಿನ ಹೊಸ ಹೊಸ ಅಧ್ಯಾಯಗಳನ್ನು ಕಲಿಯುತ್ತಾರೆ. ಇಂದು ಯುಕೆಜಿ ಪುಟಾಣಿಗಳಿಗೆ ಪದವಿ ಪ್ರದಾನ ನೀಡುವುದರರ್ಥ ಅವರ ಮುಂದಿನ ಶಿಸ್ತುಬದ್ಧ ಜೀವನಕ್ಕೆ ಅವರನ್ನು ಸಿದ್ಧರನ್ನಾಗಿ ಮಾಡುವುದು ಎಂದರ್ಥ. ಇಂದಿನ ಕಾರ್ಯಕ್ರಮದ ಮುಖ್ಯ ಉದ್ದೇಶ ಕೂಡ ಅದೇ ಎಂದು ಹೇಳುತ್ತಾ ಪುಟಾಣಿಗಳಿಗೆ ಶುಭ ಹಾರೈಸಿದರು.ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರುಕುಲ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ ಅನುಪಮ.ಎಸ್.ಶೆಟ್ಟಿ ಮಕ್ಕಳಿಗೆ ಶುಭ ಹಾರೈಸಿ, ಒಂದು ಅರ್ಥಪೂರ್ಣಕಥೆಯೊಂದಿಗೆ ಪೋಷಕರಿಗೆ ಕಿವಿ ಮಾತು ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಉಪ ಪ್ರಾಂಶುಪಾಲೆ, ಸುನಂದಾ ಪಾಟೀಲ್ , ಮುಖ್ಯ ಶಿಕ್ಷಕಿ ವಿಶಾಲಾಶೆಟ್ಟಿ ಹಾಗೂ ಎಲ್ಲಾ ಶಿಕ್ಷಕಿಯರು ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮಾ. ಪ್ರಥಮ್ ಸ್ವಾಗತಿಸಿದರು, ಕು.ಚಾರ್ವಿ ವಂದಿಸಿದರು ಹಾಗೂ ಕು. ಸನ್ನಿಧಿ ಮತ್ತು ಮಾ. ಇಲಾನ್ ಇಸ್ಮಾಯಿಲ್ ನಿರೂಪಿಸಿದರು.

 

 

Leave a Reply

Your email address will not be published. Required fields are marked *

fifteen − seven =