ಗುರುಕುಲ: ಯು.ಕೆ.ಜಿ. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟೇಶ್ವರ: ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಯು.ಕೆ.ಜಿ. ಮಕ್ಕಳ ಪದವಿ ಪ್ರದಾನ ಸಮಾರಂಭ ಗುರುವಾರ ಜರುಗಿತು. ಕುಂದಾಪುರದ ಅಮೃತೇಶ್ವರಿ ಆಸ್ಪತ್ರೆಯ ಆಯುರ್ವೇದಿಕ್ ವೈದ್ಯೆ ಸೋನಿ ಪುಟಾಣಿಗಳಿಗೆ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು

ಬಳಿಕ ಮಾತನಾಡಿದ ಅವರು ನಾವು ಶಾಲೆಗೆ ಹೋಗುವಾಗ ಈ ರೀತಿಯ ಅವಕಾಶ ಇರಲಿಲ್ಲ ಆದರೆ ಪುಟಾಣಿಗಳಿಗೆ ಇಂತಹ ಒಂದು ಅವಕಾಶ ಈ ಶಾಲೆ ಮಾಡುತ್ತಿರುವುದು ನಿಜಕ್ಕೂ ಅವಿಸ್ಮರಣೀಯ ಎಂದರು. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೇಗೆ ನಾಲ್ಕು ಹಂತಗಳು ಇರುತ್ತದೆಯೋ ಹಾಗೆ ಮಕ್ಕಳಿಗೆ ದೇವರಲ್ಲಿ ಭಕ್ತಿ, ಗುರುಹಿರಿಯರಲ್ಲಿ ಗೌರವ, ಶಿಸ್ತು ಮತ್ತು ವಿದ್ಯೆ ಎಂಬ ಈ ನಾಲ್ಕು ಅಂಶಗಳನ್ನು ಸರಿಯಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನದಲ್ಲಿ ನೀಡಿದಾಗ ಅವರು ಮುಂದೆ ಉತ್ತಮ ಪ್ರಜೆಗಳಾಗಿ ಯಶಸ್ವಿ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ. ಕೇವಲ ಮಕ್ಕಳನ್ನು ಶಾಲೆಗೆ ಕಳುಹಿಸಿದ ತಕ್ಷಣ ಪೋಷಕರ ಜವಾಬ್ಧಾರಿ ಮುಗಿಯುವುದಿಲ್ಲ. ಮಕ್ಕಳ ಅರ್ಧ ಜವಾಬ್ಧಾರಿಯ ಹೊಣೆಯನ್ನು ನೀವು ವಹಿಸಿದಾಗ ಉಳಿದರ್ಧ ಹೊಣೆಯನ್ನು ಶಿಕ್ಷಕರು ಹೊತ್ತಾಗ ಮಾತ್ರ ನವ ಸಮಾಜದ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಜಂಟಿ ಕಾರ‍್ಯನಿರ್ವಾಹಕರಾದ ಅನುಪಮ ಎಸ್. ಶೆಟ್ಟಿ ಮಕ್ಕಳಿಗೆ ಪೋಷಕರೇ ಮಾದರಿ ಆಗಬೇಕು, ಪೋಷಕರು ಕೇವಲ ಅಂಕಗಳಿಗೆ ಅವಲಂಬಿತರಾಗದೆ ಮಕ್ಕಳ ಆಸಕ್ತಿ ಕಡೆ ಗಮನ ಹರಿಸಬೇಕು. ಮಕ್ಕಳ ಅಭಿರುಚಿಯನ್ನು ಅರಿತು ಅವರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿದರೆ ಖಂಡಿತವಾಗಿಯೂ ಅವರು ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು. ಕೊನೆಯಲ್ಲಿ ಪ್ರಾಂಶುಪಾಲರಾದ ಅರವಿಂದ ಮರಳಿ ಪ್ರಾಸ್ತಾವಿಕ ನುಡಿಯ ಜೊತೆಗೆ ಪುಟಾಟಿಗಳಿಗೆ ಶುಭ ಹಾರೈಸಿದರು.

ಕಾರ‍್ಯಕ್ರಮವನ್ನು ಮಾ. ಪರಿಚಯ್ ಕು. ಆರಾಧ್ಯ ನಿರೂಪಿಸಿದರು. ಕು. ವಾರಿಧಿ ಸ್ವಾಗತಿಸಿದರು ಹಾಗೂ ಮಾ. ನಿರ್ವಾನಾ ವಂದಿಸಿದರು.

Leave a Reply

Your email address will not be published. Required fields are marked *

four + 16 =