ಗುರುಕುಲ ಶಾಲೆಯಲ್ಲಿ ಪುಷ್ಪಗಳ ದಿನ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟೇಶ್ವರ: ವಕ್ವಾಡಿ ಗುರುಕುಲ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳು ಪುಷ್ಪಗಳ ದಿನವನ್ನು ವಿಶೇಷವಾಗಿ ಆಚರಿಸಿದರು.

ಪುಟಾಣಿ ಮಕ್ಕಳು ಬಣ್ಣ-ಬಣ್ಣದ ಉಡುಗೆ ತೊಟ್ಟು ವಿವಿಧ ಬಗೆಯ ಹೂಗಳ ಜೊತೆಗೆ ವಿವಿಧ ಬಗೆಯ ಗಿಡಗಳನ್ನು ಕೂಡ ತಂದಿದ್ದರು. ಪುಟಾಣಿಗಳು ರಂಗೋಲಿಗಳಿಗೆ ಹೂಗಳನ್ನು ಅಲಂಕರಿಸುವ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಿವಿಧ ಹೂಗಳ ಹೆಸರು ಮತ್ತು ಅವುಗಳ ಉಪಯೋಗಗಳು ಹಾಗೂ ಹೂಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಸ್ಮಾರ್ಟ್ ಬೋರ್ಡ್‌ನ ವಿವಿಧ ವೀಡಿಯೋಗಳ ಮೂಲಕ ತೋರಿಸಲಾಯಿತು. ಜೊತೆಗೆ ಪುಟಾಣಿಗಳು ತಾವು ತಂದಿರುವ ಹೂವಿನ ಗಿಡಗಳನ್ನು ತಮ್ಮ ಶಾಲಾ ಕೈ ತೋಟದಲ್ಲಿ ನೆಡುವ ಮೂಲಕ ಪುಷ್ಪ ದಿನಾಚರಣೆಗೆ ಇನ್ನಷ್ಟು ಮೆರುಗು ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಜಂಟಿ ಕಾರ‍್ಯನಿರ್ವಾಹಕಿ ಅನುಪಮ.ಎಸ್.ಶೆಟ್ಟಿ ಪ್ರಾಂಶುಪಾರಾದ ಸಾಯಿಜು. ಕೆ. ಆರ್ ನಾಯರ್ ಹಾಗೂ ಎಲ್ಲಾ ಶಿಕ್ಷಕಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ten − 6 =