ಗುರುವನ್ನು ಗೌರವಿಸಿ ರಾಜ್ಯೋತ್ಸವ ಆಚರಿಸುವ ಕನ್ನಡದ ಕಟ್ಟಾಳು ಕೆ.ಜಿ ರಾವ್

Call us

Call us

ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸಲಾಯಿತು. ಅರೇ, ಈ ಕಾರ್ಯಕ್ರಮದಲ್ಲೇನಿದೆ ವಿಶೇಷ ಎಂದು ಮೂಗು ಮುರಿಯಬೇಡಿ.  ಕಾರ್ಯಕ್ರಮ ಆಯೋಜಿಸಿದ್ದು ಕನ್ನಡವನ್ನು ತನ್ನ ಉಸಿರಾಗಿಟ್ಟಕೊಂಡು ಕನ್ನಡ ಕಟ್ಟುವ ಕೆಲಸವನ್ನು ಅರ್ಥಪೂರ್ಣವಾಗಿ ಮಾಡುತ್ತಾ, ಎಲೆಯ ಮರೆಯ ಕಾಯಿಯಂತೆ ಏಕಾಂಗಿಯಾಗಿ ತನ್ನನ್ನು ತೊಡಗಿಸಿಕೊಂಡಿರುವ ಹೆಬ್ರಿಯ ಕೆ. ಗಂಗಾಧರ ರಾವ್ ಎನ್ನುವವರು. ರಾವ್ ಸರಕಾರಿ ಕಾಲೇಜೊಂದರ ಪ್ರಥಮ ದರ್ಜೆ ಸಹಾಯಕ ನೌಕರನಾಗಿ ನಿವೃತ್ತರಾದವರು. ನಿವೃತ್ತಿಯ ಬಳಿಕ ಕನ್ನಡ ರಾಜ್ಯೋತ್ಸವವನ್ನು ತಿಂಗಳು ಪೂರ್ತಿ ಅರ್ಥಪೂರ್ಣವಾಗಿ ಆಚರಿಸುವ ಅವರು ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.

Click Here

Call us

Call us

ಸುಮಾರು 35 ವರ್ಷಗಳಕಾಲ ಸರ್ಕಾರಿ ಸೇವೆ ಮಾಡಿ ವಯೋನಿವೃತ್ತ ಬಳಿಕ ರಾವ್ ಕೈಗೊಂಡ ಯೋಜನೆ ಸ್ವಲ್ಪ ಭಿನ್ನವಾದುದು. ಶಾಲಾ-ಕಾಲೇಜುಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸಾಮಾನ್ಯವಾಗಿ ಗುರುತಿಸಿ ಸನ್ಮಾನಿಸುವುದು ನೋಡುತ್ತೆವೆ. ಆದರೆ ಇದಕ್ಕೆ ಕಾರಣೀಕರ್ತರಾದ ಶಿಕ್ಷಕ-ಶಿಕ್ಷಕಿಯರನ್ನು ಗುರುತಿಸುವವರಿಲ್ಲ. ಇದನ್ನು ಗಮನಿಸಿದ ರಾವ್‌ ಅವರಿಗೆ ಒಂದು ಯೋಜನೆ ಸಿದ್ದಪಡಿಸಿದ್ದರು. ಜಿಲ್ಲೆಯಲ್ಲಿರುವ ಎಲ್ಲಾ ಪ್ರೌಢಶಾಲೆ ಮತ್ತು ಕಾಲೇಜುಗಳ ಶೇಕಡಾವಾರು ಫಲಿತಾಂಶದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಸಂಸ್ಥೆಯ ಮುಖ್ಯಸ್ಥರನ್ನು ಗೌರವಿಸಿ ಸನ್ಮಾನಿಸುವುದರ ಮೂಲಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ.

Click here

Click Here

Call us

Visit Now

ಕಳೆದ ಕೆಲವು ವರ್ಷಗಳಿಂದ ಈ ರೀತಿಯಲ್ಲಿ ಕನ್ನಡದ ಸೇವೆಯನ್ನು ಮಾಡುತ್ತಿರುವ ಇವರು ಈ ಬಾರಿ ಶೇ97.96 ಫಲಿತಾಂಶ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಬೈಂದೂರು ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಪಾಲಾಕ್ಷ ಟಿ. ಅವರನ್ನು ರಾವ್ ಗೌರವಿಸಿ ಸನ್ಮಾನಿಸಿದರು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳಿಗೆ ಜಾನಪದ, ಭಾವಗೀತೆಯ ಸ್ಪರ್ಧೆಯನ್ನು ಏರ್ಪಡಿಸಿ ಫಲಕ ಹಾಗೂ ಪ್ರಶಸ್ತಿಪತ್ರವನ್ನು ವಿತರಿಸಿದರು. ನಿವೃತ್ತ ಉಪನ್ಯಾಸಕ ಪಿ. ಶೇಷಪ್ಪಯ್ಯ, ಕಸಾಪ ಹೋಬಳಿ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಉಪನ್ಯಾಸಕರಾದ ಗುರುಮೂರ್ತಿ ತಾಮ್ರಗೌರಿ, ರಾಮನಾಥ್ ನಾಯ್ಕ್, ರಾಮಕುಮಾರ್ ಹಾಗೂ ವಿದ್ಯಾರ್ಥಿಗಳು ವಿನೂತನವಾಗಿ ಆಚರಿಸಲ್ಪಟ್ಟ ಕನ್ನಡ ರಾಜ್ಯೋತ್ಸವಕ್ಕೆ ಸಾಕ್ಷಿಯಾದರು.

ವರದಿ – ಜನನಿ ಉಪ್ಪುಂದ 

Leave a Reply

Your email address will not be published. Required fields are marked *

19 − four =