ಗುರು ಕುಟುಂಬ ಸನ್ಮಾನ – ಶಾಲಾ ಕೈತೋಟಕ್ಕೆ ಗಿಡ ಸಮರ್ಪಣೆ ಕಾರ್ಯಕ್ರಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಉತ್ತಮ ಶಿಕ್ಷಕರು ಸಮಾಜದ ಆಸ್ತಿ ಶಿಕ್ಷಕರು ತಮ್ಮ ಕೆಲಸದಿಂದ ಶಶಕ್ತ ಸಮಾಜ ನಿರ್ಮಾಣಕ್ಕೆ ಕಾರಣರಾಗುತ್ತಾರೆ ಅಂತಹ ಶಿಕ್ಷಕರ ಸೇವೆಯನ್ನು ಗುರುತಿಸುವುದು ನಮ್ಮೆಲ್ಲರ ಹೊಣೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ. ಎಂ. ಮುಂದಿನಮನಿ ತಿಳಿಸಿದರು.

Call us

Call us

ಅವರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ ) ಬೆಂಗಳೂರು- ಬೈಂದೂರು ತಾಲೂಕು ಘಟಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮಯ್ಯಾಡಿಯಲ್ಲಿ ನಡೆದ ಗುರು ಕುಟುಂಬ ಸನ್ಮಾನ – ಶಾಲಾ ಕೈತೋಟಕ್ಕೆ ಗಿಡ ಸಮರ್ಪಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.

Call us

Call us

ಮೇ, ಜೂನ್, ಜುಲೈ ತಿಂಗಳಲ್ಲಿ ನಿವೃತ್ತರಾದ ಜಯಂತಗೆ ಕೆ. ಎ. ಮುಖ್ಯೋಪಾಧ್ಯಾಯರು ಸ. ಹಿ. ಪ್ರಾ ಶಾಲೆ ಕೆರಾಡಿ. ವಾಸುದೇವ ಎಚ್ ಸ. ಹಿ. ಪ್ರಾ. ಶಾಲೆ ಕೋಟೆಬಾಗಿಲು. ವಿದ್ಯಾ ಲತಾ ಹೆಗ್ಗಡೆ ಸ. ಕಿ. ಪ್ರಾ. ಶಾಲೆ. ಶಿಕ್ಷಕಿ ಶೀಲಾವತಿ ಸ. ಕಿ. ಪ್ರಾ. ಶಾಲೆ ಕೊಡಪಾಡಿ, ವೆಂಕಟರಮಣ ಶಾಸ್ತ್ರಿ ಸ. ಹಿ. ಪ್ರಾ. ಶಾಲೆ ಇವರನ್ನು ಸನ್ಮಾನಿಸಲಾಯಿತು.

ಕ. ರಾ. ಪ್ರಾ. ಶಾ. ಶಿ. ಸಂಘ (ರಿ ) ಬೈಂದೂರು ತಾಲೂಕು ಘಟಕ ಅಧ್ಯಕ್ಷರಾದ ಶೇಖರ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಘದ ಗೌರವಾಧ್ಯಕ್ಷರಾದ ಕರುಣಾಕರ ಶೆಟ್ಟಿ ಜಿಲ್ಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಶಶಿಧರ್ ಶೆಟ್ಟಿ ತಾಲೂಕು ಸಂಘದ ಮಾಜಿ ಅಧ್ಯಕ್ಷರಾದ ಮಹದೇವ ಮಂಜ ನಿವೃತ್ತ ಶಿಕ್ಷಕರಾದ ಶ್ರೀನಿವಾಸ್ ಉಜ್ಜರಿ ಕೃಷ್ಣದೇವ ಶಾಸ್ತ್ರಿ, ಶಾಲಾ ಮುಖ್ಯೋಪಾಧ್ಯಾಯ ರಾಜು ಎಸ್ ಮಯ್ಯಾಡಿ. ಶಿಕ್ಷಣ ಸಂಯೋಜಕರಾದ ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭ ಬೈಂದೂರು ಪ್ರಾ. ಶಾ. ಶಿ.ಸ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಶಾಲೆಗೆ ಗಿಡ ಸಮರ್ಪಣೆ ಮಾಡಿದರು. ಶಿಕ್ಷಕ ಸಂಘದ ಪ್ರತಿನಿಧಿ ನಾಗರತ್ನ ಎಸ್, ಖಜಾಂಚಿ ಅಚ್ಚುತ ಬಿಲ್ಲವ ಸ್ವಾಗತಿಸಿದರು ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು ಬೈಂದೂರು ಕ. ರಾ.ಪ್ರಾ. ಶಾ. ಶಿ ಸಂಘ (ರಿ ) ಉಪಾಧ್ಯಕ್ಷರಾದ ಗಿರಿಜಾ ಧನ್ಯವಾದ ಸಮರ್ಪಿಸಿದರು. ಸಹಕಾರ್ಯದರ್ಶಿ ಮಂಜುನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

two × five =